ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ ; ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್- ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿಯನ್ನು ಮೊಹಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.
ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.
ಸದ್ಯ ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













