17 ವರ್ಷಗಳ ವೃತ್ತಿಜೀವನದಲ್ಲಿ ; ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ-ಕಹಳೆ ನ್ಯೂಸ್

ಅಡಿಲೇಡ್: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ವಿರಾಟ್ ಕೊಹ್ಲಿ ಕೆಟ್ಟ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ನಾಯಕ ಶುಭಮನ್ ಗಿಲ್ 9 ರನ್ ಗಳಿಸಿ ಬಾರ್ಟ್ಲೆಟ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೊಹ್ಲಿ 4 ಎಸೆತ ಎದುರಿಸಿ ಎಲ್‌ಬಿಗೆ ಔಟಾದರು. ಈ ಮೂಲಕ 17 ರನ್‌ಗಳಿಗೆ ಎರಡು ಅಮೂಲ್ಯ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು.
ಅ.19 ರಂದು ಪರ್ತ್‌ನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಸರಣಿಯೊಂದರಲ್ಲಿ ಕೊಹ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಇಲ್ಲಿಯವರೆಗ ಔಟ್ ಆಗಿರಲಿಲ್ಲ. ಈ ಹಿಂದೆ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್ ಮತ್ತು ಟಿ20 ಪಂದ್ಯದಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಐಪಿಲ್ ಬಳಿಕ ಕೊಹ್ಲಿ ಕುಟುಂಬದ ಸದಸ್ಯರ ಜೊತೆಗೆ ಯುಕೆಗೆ ಹೋಗಿದ್ದರು. ಅಲ್ಲಿ ಫಿಟ್ನೆಸ್ ಕಾಪಾಡಿಕೊಂಡಿದ್ದರೂ ಪಂದ್ಯದ ಅಭ್ಯಾಸ ಮಾಡಿಕೊಂಡಿರಲಿಲ್ಲ.
ಒಟ್ಟು ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಗಳಿಸಿದೆ. ಅ.25 ರಂದು ಮೂರನೇ ಏಕದಿನ ಪಂದ್ಯ ನಡೆಯಲಿದೆ.














