ಸಮೀರ್ ಎಂ.ಡಿ., ಅಜಯ್ ಅಂಚನ್ ಕುಡ್ಲ ರಾಂಪ್ ಪೇಜ್, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಅನೇಕರಿಗೆ ನ್ಯಾಯಾಲಯ ಬಿಗ್ ಶಾಕ್..!! 10 ಕೋಟಿ ಮಾನನಷ್ಟ ಮೊಕದ್ದಮೆಯಲ್ಲಿ ಮಹತ್ವದ ಬೆಳವಣಿಗೆ..!! – ಕಹಳೆ ನ್ಯೂಸ್

ಬೆಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳ, ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಸಹಿತ ಹೆಗ್ಗಡೆ ಕುಟುಂಬಸ್ಥರ ಅವಹೇಳನಾಕಾರಿ ಹೇಳಿಕೆ ನೀಡಿ ವಿಡಿಯೋ ಪ್ರಸಾರ ನೀಡದವರಿಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಬಿಗ್ ಶಾಕ್ ನೀಡಿದೆ.
ಡಿ. ಹರ್ಷೇಂದ್ರ ಕುಮಾರ್ ಹೂಡಿದ್ದ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯವು ಸಮೀರ್ ಎಂ.ಡಿ., ಅಜಯ್ ಅಂಚನ್ ಕುಡ್ಲ ರಾಂಪ್ ಪೇಜ್, ಗಿರೀಶ್ ಮಟ್ಟಣ್ಣನವರ್, ಅಣ್ಣಬಾಂಡ್ ಶ್ರೀನಾತ್ ಎಂಬವರಿಗೆ ಈ ಕೂಡಲೇ ಮಾನಹಾನಿಕರವಾಗಿ ಮಾತನಾಡಿದ ವಿಡಿಯೋಗಳನ್ನು ಡಿಲೀಟ್ ಮಾಡಬೇಕು ಮತ್ತು ಯಾಕೆ 10 ಕೋಟಿ ರೂಪಾಯಿ ಮಾನನಷ್ಟ ನೀಡಬಾರದು ಎಂದು ಕಾರಣ ಕೇಳಿ ನೋಟೀಸ್ ನೀಡಿ ಆದೇಶಿಸಿದೆ.
ಅರ್ಜಿದಾರರ ಪರ ಖ್ಯಾತ ನ್ಯಾಯವಾದಿ ರಾಜಶೇಖರ ಹಿಲ್ಯಾರ್ ವಾದ ಮಂಡಿಸಿದರು.














