Saturday, March 7, 2026
ಕ್ರೀಡೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮಿಂಚಿದ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ – ಕಹಳೆ ನ್ಯೂಸ್

1956 ರಲ್ಲಿ ಮೊದಲ ಭಾರತೀಯ ಒಲಂಪಿಕ್ ಈಜುಪಟು ದಿವಂಗತ ಶ್ರೀ ಮಹಬೂಬ್ ಶಂಶೇರ್ ಖಾನ್ ಇವರ ಸವಿ ನೆನಪಿಗಾಗಿ ಮಾಸ್ಟರ್ ಅಕ್ವಾಟಿಕ್ ಫಡೋರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ “ನ್ಯಾಷನಲ್ ಮಾಸ್ಟರ್ ಅಕ್ವಾಟಿಕ್ ಚಾಂಪಿಯನ್ಶಿಪ್ 2025” ಮಂಗಳಗಿರಿ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿಟ್ಲದ ಹೆಮ್ಮೆಯ ಪ್ರತಿಭೆ ಶ್ರೀಲಕ್ಷ್ಮಿ ವಿಟ್ಲ ರವರು ಶ್ಲಾಘನೀಯ ಪ್ರದರ್ಶನವನ್ನು ನೀಡುವುದರೊಂದಿಗೆ ತಾವು ಭಾಗವಹಿಸಿದ ಐದು ಸ್ಪರ್ಧೆಗಳಾದ 200ಮೀ. ಫ್ರೀ ಸ್ಟೈಲ್ , 100ಮೀ. ರಿಲೇ(ವೈಯಕ್ತಿಕ) 50ಮೀ.ಬಟರ್ ಫ್ಲೈ, 50ಮೀ. ಬ್ರೆಸ್ಟ್ ಸ್ಟ್ರೋಕ್, ಕರ್ನಾಟಕ ತಂಡದ Middly ರಿಲೇಯಲ್ಲಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.

ಇವರು ವಿಟ್ಲ ಕೋಟಿಕೆರೆ ಗೋಪಾಲ ಸಪಲ್ಯ ಹಾಗೂ ಲೀಲಾವತಿ ದಂಪತಿಯ ಕಿರಿಯ ಪುತ್ರಿಯಾಗಿದ್ದು ಈಜುವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಅತ್ಯುತ್ತಮ ಈಜು ತರಬೇತುಗಾರ್ತಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು