ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್ 1 ಮಿಂಚಿನ ಓಟ ; ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್-ಕಹಳೆ ನ್ಯೂಸ್

ಕಾಂತಾರ ಅಧ್ಯಾಯ 1 ರ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ಈ ಚಿತ್ರವು ದೇಶ-ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಈಗಾಗಲೇ ಸಿನಿಮಾ 500 ಕೋಟಿ ರೂ. ಕ್ಲಬ್ ಸೇರಿದೆ. ಈ ಬೆನ್ನಲ್ಲೇ ನಟ ರಿಷಬ್ ಮತ್ತು ನಿರ್ಮಾಪಕರು, ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಿಷಬ್ ಶೆಟ್ಟಿ ಬಿಳಿ ಶರ್ಟ್ ಮತ್ತು ಬಿಳಿ ಮುಂಡು ಧರಿಸಿ ದೇವಾಲಯದಲ್ಲಿ ಕಾಣಿಸಿಕೊಂಡರು. ಅನೇಕ ಅಭಿಮಾನಿಗಳು ಅವರತ್ತ ಕೈ ಬೀಸಿದರು. ಆಗ ನಟ ನಗುತ್ತಲೇ ಅಭಿಮಾನಿಗಳತ್ತ ಕೈ ಬೀಸಿದರು. ಜೊತೆಗೆ ಫ್ಯಾನ್ಸ್ ಜೊತೆ ಫೋಟೋಗಳಿಗೆ ಪೋಸ್ ನೀಡಿ, ಬಳಿಕ ಕಾರು ಹತ್ತಿ ಹೊರಟರು.
ಕಾಂತಾರ ಅಧ್ಯಾಯ 1 ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ 500 ಕೋಟಿ ಗಳಿಸಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ತಿಳಿಸಿದೆ. ‘ಗಲ್ಲಾಪೆಟ್ಟಿಗೆಯಲ್ಲಿ ದೈವಿಕ ಸಿನಿಮೀಯ ಚಂಡಮಾರುತವು ಇನ್ನೂ ಹೆಚ್ಚಿನ ಗಳಿಕೆಯನ್ನು ಮಾಡುತ್ತಿದೆ. ಕಾಂತಾರ ಅಧ್ಯಾಯ 1 ಮೊದಲ ವಾರದಲ್ಲಿ ವಿಶ್ವಾದ್ಯಂತ 509.25 ಕೋಟಿ+ ಜಿಬಿಒಸಿಯನ್ನು ದಾಟಿದೆ! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬ್ಲಾಕ್ಬಸ್ಟರ್ ಕಾಂತಾರ’ ಎಂದು ಪೋಸ್ಟ್ ಹಂಚಿಕೊಂಡಿದೆ.














