Sunday, March 8, 2026
ಬೆಂಗಳೂರುರಾಜಕೀಯರಾಜ್ಯಸುದ್ದಿ

ರಾಜ್ಯದ `BPL-ಅಂತ್ಯೋದಯ’ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಸರ್ಕಾರದಿಂದ `ಇಂದಿರಾ ಆಹಾರ ಕಿಟ್’ ವಿತರಣೆ.! – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರದಿಂದ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರದ ಕಿಟ್ ವಿತರಣೆಗೆ ನಿರ್ಧರಿಸಿದೆ. ಹಾಗಾದರೇ ಆ ಆಹಾರದ ಕಿಟ್ ನಲ್ಲಿ ಏನಿರಲಿದೆ ಎನ್ನುವ ಬಗ್ಗೆ ಮುಂದಿದೆ ಓದಿ.

ರಾಜ್ಯ ಸರ್ಕಾರದ ವತಿಯಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರದ ಕಿಟ್ ಅಂದರೆ ಪೌಷ್ಠಿಕ ಆಹಾರದ ಕಿಟ್ ಅನ್ನು ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸಲು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮದ ಕಿಟ್ ಎಂದು ನಾಮೀಕರಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು

ಇಂದಿರಾ ಆಹಾರದ ಕಿಟ್ ನಲ್ಲಿ ಏನಿರಲಿದೆ?

ತೊಗರಿ ಬೇಳೆ – 1 ಕೆಜಿ
ಹೆಸರುಕಾಳು- 1 ಕೆಜಿ
ಅಡುಗೆ ಎಣ್ಣೆ – 1 ಲೀಟರ್
ಸಕ್ಕರೆ – 1 ಕೆಜಿ
ಉಪ್ಪು- 1 ಕೆಜಿ
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಅಯವ್ಯಯದಲ್ಲಿ ಹಂಚಿಕೆ ಮಾಡಿರುವ ರೂ.6,426 ಕೋಟಿ ಅನುದಾನದಲ್ಲಿ ರೂ.6,119.52 ಕೋಟಿ ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ನುಮೋದನೆ ನೀಡಿದೆ.