ಪುಣಚ ಪಾಲಾಸ್ತಡ್ಕದಲ್ಲಿ ಇಂಟರ್ ಲಾಕ್ ಘಟಕದ ಸಿಸಿ ಕ್ಯಾಮಾರದ ಡಿವಿಆರ್ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟ ಪ್ರಕರಣ; ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದ ಪೋಲೀಸರು -ಕಹಳೆ ನ್ಯೂಸ್

ಪುಣಚ : ಪಿರ್ಯಾದಿದಾರರಾದ ಆನಂದಗೌಡರವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪಾಲಾಸ್ತಡ್ಕ ಎಂಬಲ್ಲಿ ಪತ್ನಿ ಹೆಸರಿನಲ್ಲಿ ಪಿ ಬಿ ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕವನ್ನು ನಡೆಸುತ್ತಿದ್ದು ಸದ್ರಿ ಘಟಕಕ್ಕೆ ಸಿಸಿ ಕ್ಯಾಮಾರವನ್ನು ಅಳವಡಿಸಿರುತ್ತಾರೆ. ದಿನಾಂಕ:28-09-2025 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ಇಂಟರ್ ಲಾಕ್ ಘಟಕವನ್ನು ಪರೀಶಿಲಿಸಿ ನಂತರ 6.00 ಗಂಟೆಗೆ ಇಂಟರ್ ಲಾಕ್ ಘಟಕಕ್ಕೆ ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶ ಮಾಡಿ ಅಳವಡಿಸಿದ್ದ 2 ಸಿಸಿ ಕ್ಯಾಮಾರಗಳನ್ನು, ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮಾರದ ಡಿವಿಆರ್ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿರುತ್ತದೆ ಎಂದು ಪಿರ್ಯಾದಿಯವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 135/2025 ಕಲಂ:329(3) , 326,299 BNS 2023 ರಂತೆ ಪ್ರಕರಣದ ದಾಖಲಾಗಿರುತ್ತದೆ.

ಪ್ರಕರಣಕ್ಕೆ ಸಂಭದಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಡಿವಿಆರ್ ಸುಟ್ಟುಹೋಗಿದ್ದರೂ ಮಾಲೀಕರ ಮೊಬೈಲ್ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಕೃತ್ಯವೆಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಪೋಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿರುವುದಾಗಿದೆ. ಇವರನ್ನು ಮಾನ್ಯ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.














