ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನಕ್ಕೆ ದಾನದ ರೂಪದಲ್ಲಿ ಕೃಷಿ ಭೂಮಿಯನ್ನು ಹಸ್ತಾಂತರ ಮಾಡಿದ ಮಹಾತಾಯಿ – ಕಹಳೆ ನ್ಯೂಸ್

ವಿಟ್ಲ : ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನಕ್ಕೆ ದಾನದ ರೂಪದಲ್ಲಿ ಒಂದು ಎಕರೆ ಕೃಷಿ ಭೂಮಿಯನ್ನು ಹಸ್ತಾಂತರ ಮಾಡಲಾಯಿತು.
ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನದ ಶ್ರೀ ಮಲರಾಯ ,ಮಹಿಷಂದಾಯ, ಧೂಮಾವತಿ, ರಕ್ತೇಶ್ವರಿ, ಪಂಜುರ್ಲಿ, ಕಲ್ಕುಡ , ಕಲ್ಲುರ್ಟಿ , ನೆತ್ತೆರ್ ಕಣ್ ಹೀಗೆ ಪರಿವಾರ ದೈವದ ಸುವರ್ಣ ಕುಟುಂಬಸ್ಥರ ತರವಾಡು ಮನೆಗೆ ಎಲ್ಲರ ಪ್ರೀತಿಯ “ಕೊಟ್ಯದ ಅಪ್ಪೆ ” ಎಂದು ಕರೆಯಲ್ಪಡುವ ಲೀಲಾ ಹೆಂಗ್ಸು ಇವರು ದೈವಸ್ಥಾನಕ್ಕೆ ಒಂದು ಎಕರೆ ಕೃಷಿ ಭೂಮಿಯನ್ನು ದಾನವಾಗಿ ನೀಡಿದ ಮಹಾತಾಯಿ.
ಇವರು ಮೂಲತ: ಬಳಂತಿಮೊಗರು ನವರೇ ಆಗಿರುತ್ತಾರೆ ಇವರು ಸುವರ್ಣ ಕುಟುಂಬಸ್ಥರ ದೈವಸ್ಥಾನದ ಪಕ್ಕದಲ್ಲೆ ಒಂದು ಸಣ್ಣ ಮನೆಯಲ್ಲಿ ಬಡತನದ ಕೃಷಿ ಜೀವನ ಸಾಗಿಸುತಿದ್ದಾರೆ. ಇವರಿಗೆ ಇಲ್ಲಿನ ದೈವಗಳ ಮೇಲೆ ಅಪಾರ ಭಕ್ತಿ ನಂಬಿಕೆ.
ಸ್ವಾರ್ಥ ತುಂಬಿದ ಈ ಕಾಲದಲ್ಲಿ ಇಂತಹ ಮಹಾತಾಯಿ ಎಲ್ಲರಿಗೂ ಆದರ್ಶ ಎಂದರೆ ತಪ್ಪಾಗಲಾರದು. ಹಾಗೆ ಇವರಿಗೆ ಸುವರ್ಣ ಕುಟುಂಬದ ಪ್ರತಿಯೊಬ್ಬ ಸದಸ್ಯರು ಚಿರಋಣಿಯಾಗಿರುತ್ತಾರೆ. ಇವರಿಗೆ ಇನ್ನಷ್ಟು ಕಾಲ ಆರೋಗ್ಯ ಆಯಸ್ಸು ಕೊಟ್ಟು ಆ ಪರಿವಾರ ದೈವಗಳು ಕರುಣಿಸಲಿ.














