Monday, March 9, 2026
ಕಾಸರಗೋಡುಜಿಲ್ಲೆಸುದ್ದಿ

ಅಡ್ಕ ಗೋಪಾಲಕೃಷ್ಣ ಭಟ್ ನಿವಾಸಕ್ಕೆ ಎಡನೀರು ಶ್ರೀಗಳ ಭೇಟಿ ; ಆರೋಗ್ಯ ವಿಚಾರಿಸಿ, ಅನುಗ್ರಹಿಸಿದ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಮಂಗಳವಾರ ನಿವೃತ್ತ ಮುಖ್ಯ ಶಿಕ್ಷಕರು, ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದರು, ಮಲಯಾಳಂ ಯಕ್ಷಗಾನದ ಪಿತಾಮಹ ಎಂದೇ ಖ್ಯಾತರಾದ ಅಡ್ಕ ಗೋಪಾಲಕೃಷ್ಣ ಭಟ್ (92) ಅವರ ನಿವಾಸಕ್ಕೆ ಭೇಟಿ ನೀಡಿದರು.

ಅವರ ಆರೋಗ್ಯ ವಿಚಾರಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಅಡ್ಕ ಅವರು ಶ್ರೀ ಗುರುಗಳಲ್ಲಿ ತಮ್ಮ ಕಲಾಜೀವನದ ಅನುಭವಗಳನ್ನು ಹೇಳಿ ಶ್ರೀ ಗುರುಗಳ ಆಗಮನಕ್ಕೆಅತಿಯಾದ ಸಂತೋಷ ವ್ಯಕ್ತಪಡಿಸಿ ತುಂಬು ಹೃದಯದ ಧನ್ಯವಾದ ಅರ್ಪಿಸಿದ ಭಾವನಾತ್ಮಕ ಸನ್ನಿವೇಶ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು