
– ದಸರಾದಲ್ಲಿ ಶತಮಾನದ ವಿಂಟೇಜ್ ಕಾರುಗಳ ಕಲರವ
ಮೈಸೂರು: ನಗರದಲ್ಲಿಂದು ಮಹಿಷ ದಸರಾ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ.
ದಸರಾ ಸೊಬಗು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಹತ್ತು ಹಲವು ಆಕರ್ಷಣೆಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಅದರಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಕೂಡ ಒಂದು. ನಾವು ನೀವು ನೋಡಿರದ ಎಷ್ಟೋ ಅದ್ಬುತ ವಿಂಟೇಜ್ ಕಾರುಗಳ ಒಂದೇ ಜಾಗದಲ್ಲಿ ಕಾಣುಸಿಗುತ್ತೀರೋದು ವಿಶೇಷ. ಮತ್ತೊಂದೆಡೆ ಯುವ ದಸರಾಕ್ಕೂ ಚಾಲನೆ ಸಿಕ್ಕಿದ್ದು ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಮೋಡಿ ಮಾಡಿತ್ತು. ಇಂದು ಮಹಿಷ ದಸರಾ ಹಿನ್ನೆಲೆ. ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪ್ರಮುಖವಾಗಿ ಯುಕೆ, ಯುಎಸ್, ಇಟಲಿ ಸೇರಿದಂತೆ ಹಲವು ದೇಶಗಳ ಕಾರುಗಳು. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ನಂತಹ ಹಲವು ಮರೆಯಾದ ಕಾರುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿವೆ. ಕಾರುಗಳ ಸಂಗ್ರಹ ಬಗ್ಗೆ ಮಾಲೀಕರಾದ ಸಾವಿತ್ರಿ ಗೋಪಿನಾಥ ಶೆಣೈ ಮಾತನಾಡಿ, ಇದು ನನ್ನ ಪತಿ ಹವ್ಯಾಸ. ಹಲವು ವರ್ಷಗಳಿಂದ ನಾನಾ ದೇಶಗಳಿಂದ ಈ ಕಾರುಗಳನ್ನ ತಂದು ಸಂಗ್ರಹಿಸಲಾಗಿದೆ.
ಇನ್ನೂ ಇಲ್ಲಿ ಕೇವಲ ಕಾರ್ ಗಳು ಮಾತ್ರ ಅಲ್ಲದೇ ಹಳೆಯ ಬೈಕ್‌ಗಳೂ ಕಾಣಸಿಗುತ್ತಿವೆ. ಆರ್‌ಎಕ್ಸ್, ಜರ್ಮನ್ ಮಾಡೆಲ್ ಓಲ್ಡ್ ಬಿಎಂಡಬ್ಲ್ಯೂ ಬೈಕ್, ರಾಯಲ್ ಎನ್ಫಿಲ್ಡ್ ಓಲ್ಡ್, ಸೇರಿದಂತೆ ಹಲವು ಬೈಕ್ ಗಳು ಕೂಡ ಕಣ್ಮನ ಸೆಳೆಯುತ್ತಿವೆ.
ಯುವ ದಸರಾ 2025ಕ್ಕೆ ಚಾಲನೆ..!
ದಸರಾ ಅಂದ್ರೆ ಯುವ ದಸರಾನೆ ತುಂಬಾ ಫೇಮಸ್. ಇದೀಗ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದ್ರು.














