Thursday, March 12, 2026
ಅಂಕಣಸುದ್ದಿ

ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿದ್ದಾರೆಂದು ತೋರಿಸಲು ಸಿದ್ದರಾಮಯ್ಯ ನಾಟಕ ; ಯತ್ನಾಳ್-ಕಹಳೆ ನ್ಯೂಸ್

-ಸೋನಿಯಾ ಗಾಂಧಿ ನಿರ್ದೇಶನದಂತೆ ಸಿದ್ದರಾಮಯ್ಯನವರು ಕೀಳು ಮಟ್ಟದ ವ್ಯವಸ್ಥೆ ತಂದಿದ್ದಾರೆ

ವಿಜಯಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಇದು ಸಿದ್ದರಾಮಯ್ಯನ ನಾಟಕ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಅವರ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಜಾತಿಗಣತಿಯನ್ನು ಕೈಬಿಡಬೇಕು. ಹೇಗಿದ್ದರೂ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ. ಕೇವಲ ಕೇಂದ್ರಕ್ಕೆ ಮಾತ್ರ ಜಾತಿಗಣತಿ ನಡೆಸಲು ಅಧಿಕಾರವಿದೆ. ರಾಜ್ಯಕ್ಕೆ ಅಧಿಕಾರವಿಲ್ಲ. ಆದರೆ ಇವರು ಸುಮ್ಮನೇ ರಾಜ್ಯದ ಜನರ ದಾರಿ ತಪ್ಪಿಸಲು, ರಾಜ್ಯದಲ್ಲಿ ಲಿಂಗಾಯರು, ಒಕ್ಕಲಿಗರು ಕಡಿಮೆ ಇದ್ದಾರೆ ಎಂದು ತೋರಿಸಲು ಮತ್ತು ಅಲ್ಪಸಂಖ್ಯಾತ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಸಿದ್ದರಾಮಯ್ಯನ ನಾಟಕವಿದು ಎಂದು ಆಗ್ರಹಿಸಿದರು.

ಜಾಹೀರಾತು
ಜಾಹೀರಾತು

ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಎಂದು ಮಾಡಿರುವ ವರ್ಗಗಳನ್ನು ಈ ಮೊದಲು ಸೋನಿಯಾ ಗಾಂಧಿ ವ್ಯವಸ್ಥಿತವಾಗಿ ಹೊಸ ಹೊಸ ನಾಮಗಳನ್ನು ಕೊಟಿದ್ದರು. ಅವರು ಇಡೀ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರ ಮಾಡಬೇಕೆಂದುಕೊಂಡಿದ್ದಾರೆ. ಈ ಸಂಚಿನ ಹಿನ್ನೆಲೆ ಇದೀಗ ಈ ರಾಜ್ಯದಲ್ಲಿ ಜಾತಿವರ್ಗೀಕರಣ ಮಾಡಿದ್ದಾರೆ. ಆ ಜಾತಿಗಳು ನಮ್ಮ ದೇಶದಲ್ಲಿಯೇ ಇಲ್ಲ. ಭಾರತದಲ್ಲಿಯೂ ಇಲ್ಲ. ವಿಶ್ವದಲ್ಲಿಯೂ ಇಲ್ಲ. ಕೇವಲ ಸೋನಿಯಾ ಗಾಂಧಿಯ ನಿರ್ದೇಶನದಂತೆ ಸಿದ್ದರಾಮಯ್ಯನವರು ಇಂತಹ ಅತ್ಯಂತ ಕೀಳು ಮಟ್ಟದ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರವಾಗಿ ಮಾತನಾಡಿ, ಇದು ಧಾರ್ಮಿಕ ಮನೋಭಾವನೆಗೆ ಸಂಬಂಧಿಸಿದ್ದು, ಕೋರ್ಟ್‌ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಕೋರ್ಟ್‌ಗೆ ಹೋಗಿದ್ದು ತಪ್ಪು. ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇ ತಪ್ಪು ಎಂದು ತಿಳಿಸಿದರು.