ಹಾವುಗಳ ಬಾಯಿಗೆ ಪ್ಲಾಸ್ಟರ್ ಸುತ್ತಿ ಹಿಂಸಾತ್ಮಕವಾಗಿ ವರ್ತನೆ-ದೂರು ದಾಖಲು -ಕಹಳೆ ನ್ಯೂಸ್

ಶಿವಮೊಗ್ಗ: ಉಂಬ್ಳೆಬೈಲು ವಲಯ ಅರಣ್ಯ ವ್ಯಾಪ್ತಿಯ ಮಳಲಿಕೊಪ್ಪದಲ್ಲಿ ಹೆಬ್ಬಾವು ಹಾಗೂ ನಾಗರಹಾವಿನ ಜತೆ ಹಿಂಸಾತ್ಮಕವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಮೇಲೆ ಆರೋಪಿ ಮನೆ ಮೇಲೆ ದಾಳಿ ಮಾಡಿ ಹಾವುಗಳನ್ನು ರಕ್ಷಿಸಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಮಳಲಿಕೊಪ್ಪ ಬಳಿ ಹಾವುಗಳನ್ನು ಹಿಡಿದು ಅದರ ಬಾಯಿಗೆ ಪ್ಲಾಸ್ಟರ್ ಸುತ್ತುವುದು ಕಂಡು ಬಂದಿತ್ತು. ಹೆಬ್ಬಾವು ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಶೆಡ್ಯೂಲ್ 1 ಗೆ ಸೇರಿದ ಉರಗವಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೆ ಅರಣ್ಯಾಧಿಕಾರಿಗಳು ಮಳಲಿಕೊಪ್ಪದ ಇರ್ಫಾನ್ ಮತ್ತು ಮೂವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ನಂತರ ಇರ್ಫಾನ್ ಮನೆ ಮೇಲೆ ದಾಳಿ ನಡೆಸಿ ಚೀಲದಲ್ಲಿ ಇದ್ದ ಕೆಲ ಹಾವುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.













