Sunday, March 8, 2026
ಅಂಕಣಕ್ರೈಮ್ದೆಹಲಿಸುದ್ದಿ

BMW ಕಾರು ಅಪಘಾತಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿ ಬಲಿ ; 24 ಗಂಟೆಗಳಲ್ಲಿ ಚಾಲಕ ಅರೆಸ್ಟ್‌-ಕಹಳೆ ನ್ಯೂಸ್

ನವದೆಹಲಿ: ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ  ಹಣಕಾಸು ಸಚಿವಾಲಯದ ಅಧಿಕಾರಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲೇ ಆರೋಪಿಯನ್ನ ಬಂಧಿಸಲಾಗಿದೆ.

ಬಂಧಿತ ಆರೋಪಿ ಮಹಿಳೆಯನ್ನ ಗಗನ್‌ಪ್ರೀತ್‌ ಕೌರ್‌ ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಾಂಗ್ಲಾ ಸಾಹಿಬ್‌ ಗುರುದ್ವಾರದಿಂದ ತಮ್ಮ ಬೈಕ್‌ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಗುದ್ದಿತ್ತು. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52)  ಸಾವನ್ನಪ್ಪಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಮಧ್ಯಾಹ್ನ ಅಪಘಾತ ಮಾಡಿದ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಅಪರಾಧ, ನರಹತ್ಯೆ, ಸಾಕ್ಷ್ಯ ನಾಶ ಮತ್ತು ದುಡುಕಿನ ಚಾಲನೆ ಪ್ರಕರಣಗಳನ್ನ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು

38 ವರ್ಷ ವಯಸ್ಸಿನ ಗಗನ್‌ಪ್ರೀತ್‌ ಕೌರ್‌ 40 ವರ್ಷ ವಯಸ್ಸಿನ ಪರೀಕ್ಷಿತ್‌ ಮಕ್ಕಡ್‌ ಅವರನ್ನ ವಿವಾಹವಾಗಿದ್ದು, ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಐಷಾರಾಮಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದಾರೆ. ಅಪಘಾತ ಸಂದರ್ಭದಲ್ಲಿ ಪತಿ ಪರೀಕ್ಷಿತ್‌ ಮಕ್ಕಡ್‌ ಕೂಡ ಇದ್ದರು, ಈ ಕಾರಣಕ್ಕಾಗಿ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರನ್ನ ಉಲ್ಲೇಖಿಸಲಾಗಿದೆ.

ಅಪಘಾತ ಸಂಭವಿಸಿದ್ದು ಎಲ್ಲಿ, ಹೇಗೆ?
ಮೃತ ನವಜೋತ್ ಸಿಂಗ್ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ತಮ್ಮ ಪತ್ನಿ ಸಂದೀಪ ಕೌರ್ ಜೊತೆಗೆ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ನಂತರ ಇಬ್ಬರೂ ಆರ್‌.ಕೆ ಪುರಂನಲ್ಲಿರುವ ಕರ್ನಾಟಕ ಭವನದಲ್ಲಿ ಊಟ ಮಾಡಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನವಜೋತ್‌ ಮತ್ತು ಸಂದೀಪ್ ದಂಪತಿಯನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಮಗ ಗಗನ್‌ದೀಪ್‌ ಕೂಡ ಜೊತೆಗಿದ್ದರು.

ಪತ್ನಿ ಆರೋಪ ಏನು?
ನಾನು ಗಗನ್‌ಪ್ರೀತ್‌ಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳುತ್ತಲೇ ಇದ್ದೆ. ವ್ಯಾನ್‌ ಚಾಲಕನಿಗೂ ಮನವಿ ಮಾಡಿದೆ. ಆದ್ರೆ ಅಪಘಾತ ಸ್ಥಳದಿಂದ 19 ಕಿಮೀ ದೂರದಲ್ಲಿ ಜಿಟಿಬಿ ನಗರದಲ್ಲಿರುವ ನುಲೈಫ್‌ ಆಸ್ಪತ್ರೆಗೆ ಕರೆದೊಯುವಂತೆ ಆಕೆ ಹೇಳಿದಳು. ಇದರಿಂದಾಗಿ ನನ್ನಪತಿ ಸಾವನ್ನಪ್ಪಿದ್ದಾರೆ ಎಂದು ಮೃತ ನವಜೋತ್‌ ಪತ್ನಿ ಸಂದೀಪ ಕೌರ್ ಹೇಳಿದ್ದಾರೆ.