ಕಬಡ್ಡಿ ಆಟವು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಶಾರಿರಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಹಕಾರಿ- ಬೇಬಿ ಕುಂದರ್ -ಕಹಳೆ ನ್ಯೂಸ್

ಕಲ್ಲಡ್ಕ : ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗವಾಗಿದೆ ಮಣ್ಣಿನ ಸೊಗಡಿನ ಕಬಡ್ಡಿ ಪಂದ್ಯಾಟವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಶಾರಿರಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಈ ಆಟವು ಪ್ರಮುಖ ಪಾತ್ರವಾಗಿದೆ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಯಾಗಿ ನೀಡುತ್ತಿರುವ ದೈಹಿಕ ಶಿಕ್ಷಣವು ಆಟೋಟ ಮತ್ತು ಪಂದ್ಯಾಟಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದಂತಾಗಿದೆ ನಮ್ಮ ಮಣ್ಣಿನ ಸೊಗಡನ್ನು ಉಳಿಸಿಕೊಂಡು ವಿದ್ಯಾರ್ಥಿಗಳು ಈ ಆಟದಲ್ಲಿ ಹೆಸರು ಮಾಡಿ ಎತ್ತರಕ್ಕೆ ಏರುವಂತಾಗಲಿ ಎಂದು ರಾಷ್ಟ್ರೀಯ ಮಟ್ಟದ ಕಬ್ಬಡಿ ಆಟಗಾರ ಬಂಟ್ವಾಳ ನಗರ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಹೇಳಿದರು.


ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ 14 ವರ್ಷದ ಒಳಗಿನ ವಯೋಮಿತಿಯ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟ 2025 -26 ರ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಳಿಮಾರ್ ವಹಿಸಿದ್ದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ರವರು ಪಂದ್ಯಾಟ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ, ಕ್ರೀಡೆಗಳಿಂದ ಮಾನಸಿಕ ನೆಮ್ಮದಿಯು ದೊರಕುತ್ತದೆ ಇಂದಿನ ಯುವ ಜನತೆಯು ಹಾದಿ ತಪ್ಪದಿರುವಲ್ಲಿ ಕ್ರೀಡೆಗಳು ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುತ್ತವೆ ಎಂದು ಅದ್ದೂರಿಯಾಗಿ ಕಾರ್ಯಕ್ರಮ ಸಂಘಟಿಸಿದ್ದಕ್ಕಾಗಿ ಇಲಾಖೆ ವತಿಯಿಂದ ಅಭಿನಂದಿಸಿ ಶಾಲೆಗೆ ಅಭಿನಂದನ ಪತ್ರವನ್ನು ಹಸ್ತಾಂತರಿಸಿದರು.
ಕ್ರೀಡೆ ಎನ್ನುವುದು ಕೇವಲ ಆಟವಲ್ಲ ಅದು ಶಿಸ್ತು ಶಕ್ತಿ ಮತ್ತು ಒಗ್ಗಟ್ಟಿನ ಪಾಠವನ್ನು ಕಲಿಸುವ ಜೀವನ ಶೈಲಿಯಾಗಿದೆ ಕ್ರೀಡೆಗಳು ಮನೋರಂಜನೆಯನ್ನು ಅಷ್ಟೇ ಅಲ್ಲದೆ ಆರೋಗ್ಯದ ಮೂಲ ವಾಗಿದೆ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಜೀವನದ ಶಿಸ್ತನ್ನು ಕಾಪಾಡುವಲ್ಲಿ ಪಂದ್ಯಾಟಗಳು ಪೂರಕವಾಗಿದೆ ಎಂಬುದಾಗಿ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿಗಳಾದ ಆಶಾ ನಾಯಕ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯರಾಮ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ, ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷ ದಿವಾಕರ್ ಶೆಟ್ಟಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಪದ್ಮನಾಭ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕೊರಗಪ್ಪ ನಾಯ್ಕ, ವಿಟ್ಲ ಟೌನ್ ಪಂಚಾಯತ್ ಸದಸ್ಯ ರವೀಶ್ ವಿಟ್ಲ, ಲಯನ್ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ ,ಕಲ್ಲಡ್ಕ ಕೇಟಿ ಹೋಟೆಲ್ ಮಾಲಕ ರಾಜೇಂದ್ರ ಹೊಳ್ಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವ ಪೂಜಾರಿ ಬಿರ್ವ, ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ,ಜಯಪ್ರಕಾಶ್ ತೆಕ್ಕಿಪಾಪು, ಜಯರಾಮ ರೈ ಕಲ್ಲಡ್ಕ, ನಿವೃತ್ತ ಸೇನಾನಿ ಚಂದ್ರಶೇಖರ್, ಪಂಚಾಯತ್ ಸದಸ್ಯ ಸಂದೀಪ್ ಕೆಲಿಂಜ, ಮಾತೃಶ್ರೀ ಗೆಳೆಯ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಕಾಶ್ ಬೆತ್ತಸರವು, ಲಯನ್ಸ್ ಕ್ಲಬ್ ಅಮ್ಟೂರು ಅಧ್ಯಕ್ಷರಾದ ಇಲಿಯಾಸ್ ಡಿಸೋಜಾ, 2025 26 ನೇ ಸಾಲಿನ ಬಂಟ್ವಾಳ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಗದೀಶ ರೈ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ, ಚಂದ್ರಶೇಖರ್, ಸುಧಾಕರ, ತುಂಬೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಬಾಬು ಮಾಸ್ಟರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ವಿ, ಮಂಚಿ ವಲಯದ ನೂಡಲ್ ಶಿಕ್ಷಕರಾದ ರಫಿ ಮತ್ತು ರಾಘವೇಂದ್ರ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ,ಹಾಗೂ ಪದಾಧಿಕಾರಿಗಳು , ಪತ್ರಕರ್ತ ಸಂದೀಪ್ ಸಾಲಿಯನ್, ಸೂಕ್ತ ಟಿವಿ ಮುಖ್ಯಸ್ಥ ಪ್ರದೀಪ್ ಪೂಜಾರಿ, ಕಲ್ಲಡ್ಕ ವಲಯ ನೋಡಲ್ ಅಧಿಕಾರಿಯಾದ ಜಗದೀಶ್, ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಅಖಿಲ್ ಶೆಟ್ಟಿ ಸರಪಾಡಿ, ಜಗದೀಶ್ ರೈ ತುಂಬೆ, ಚಿನ್ನಪ್ಪ ನಾವೂರು, ಸುರೇಶ್ ಶೆಟ್ಟಿ, ಚಂದಳಿಕೆ, ಜನಾರ್ದನ ಕೊಯಿಲ, ವಿನೋದಕುಮಾರಿ ಮಂಚಿ ಕುಕ್ಕಜೆ ಉಪಸ್ಥಿತರಿದ್ದರು.
ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಹಾಗೂ ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಗಣೇಶ್ ಕೊಡಿ, ಮೋನಪ್ಪ ಗಣೇಶ್ ಕೊಡಿ, ರತನ್ ಆಳ್ವ, ಶಾಲಾ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸಹಕರಿಸಿದರು.
ನಂತರ ನಡೆದ ಪಂದ್ಯಾಟದಲ್ಲಿ ವಿಟ್ಲ ಆರ್ ಎಂ ಎಸ್ ಎ ವಿಟ್ಲ ತಂಡ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ, ಬಾಲಕಿಯರ ವಿಭಾಗದಲ್ಲಿ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ ಪಡೆದುಕೊಂಡಿತು.
ಕಾರ್ಯಕ್ರಮದ ಅಚ್ಚುಕಟ್ಟುವಿನ ವ್ಯವಸ್ಥೆ ಹಾಗೂ ನಿರ್ವಹಣೆ ಕಾರ್ಯಕ್ರಮಕ್ಕೆ ಭಾಗವಹಿಸಿದ ಕ್ರೀಡಾಭಿಮಾನಿಗಳ ಗಮನಸೆಳೆಯಿತು.














