Saturday, March 14, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮ ಸೆ. 7 ರಂದು ಜನತಾ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಬಂಟ್ವಾಳ : ಧೇಯಗೀತೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಈ ವಿದ್ಯಾ ಸಂಸ್ಥೆಯ ಸಂಚಾಲಕಿ ಶ್ರೀಮತಿ ಡಾ.ಅಶ್ವಿನಿ ಕೃಷ್ಣಮೂರ್ತಿ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಲ್ಲಡ್ಕ ಪುಷ್ಪಕರ ರೈ ವಹಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಕುದ್ದುಪದವು ಶಾಲೆಯ ಶಿಕ್ಷಕ ವಿಠಲ ಜಿ ಹಾಗೂ ವಲಯ ಮೇಲ್ವಿಚಾರಕರಾದ ಶ್ರೀ ಚಂದ್ರಶೇಖರ್ ಇವರು ಭಾಗವಹಿಸಿದರು. ಅಪರಾಹ್ನ ನಡೆದ ಸಮರೂಪ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಮೈರುಗ ವಹಿಸಿದರು. ಉದ್ಘಾಟನೆ ಗೈದ ವಿಟ್ಲ ತಾಲೂಕು ಯೋಜನಾಧಿಕಾರಿ ಶ್ರೀ ಸುರೇಶ್ ಗೌಡರು, ಒಕ್ಕೂಟದಲ್ಲಿ ನಡೆದ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಮೆ ಚ್ಚುಗೆ ವ್ಯಕ್ತಪಡಿಸುತ್ತಾ, ಯೋಜನೆ ನಡೆದು ಬಂದ ದಾರಿ ಯೋಜನೆಯ ಮೂಲಕ ಎಲ್ಲಾ ಸದಸ್ಯರು ಅಭಿವೃದ್ಧಿ ಹೊಂದಿದ ಬಗ್ಗೆ ವಿವರಿಸಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಡಿಗ್ರಿ ಗಳಲ್ಲಿ 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳನ್ನು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿದ ಮಹನೀಯರನ್ನು ಹಿರಿಯರನ್ನು ಸನ್ಮಾನಿಸಲಾಯಿತು.

ವಾರ್ಷಿಕ ವರದಿಯನ್ನು ಸೇವ ಪ್ರತಿನಿಧಿ ಗಾಯತ್ರಿ ಎಸ್ ಇವರು ಮಂಡಿಸಿದರು. ಪುಷ್ಪಕರ ರೈ ಇವರು ಸ್ವಾಗತ ನೀಡಿ, ಶ್ರೀಮತಿ ಕಾವ್ಯ ಇವರು ಧನ್ಯವಾದಗೈದರು. ಶ್ರೀ ಯತೀಶ್ ಉಳಯ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು