ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಎಂಗೇಜ್‌ಮೆಂಟ್ ಎಷ್ಟಿದೆ; ಸಂಸದರಿಗೆ ಮೋದಿ ಪ್ರಶ್ನೆ-ಕಹಳೆ ನ್ಯೂಸ್

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಎಂಗೇಜ್‌ಮೆಂಟ್ ಎಷ್ಟಿದೆ ಎಂದು ಸಂಸದರ ಬಳಿ ಪ್ರಧಾನಿ ನರೇಂದ್ರ ಮೋದಿ ವರದಿ ಕೇಳಿದ್ದಾರೆ.
ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಬಿಜೆಪಿ ಸಂಸದರಿಗೆ ಕಾರ್ಯಾಗಾರ ಆಯೋಜನೆಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವುದು ಹೇಗೆ? ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹೇಗೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಯಿತು ಎಂದು ವರದಿ ತಿಳಿಸಿವೆ.
ಉದಾಹರಣೆಗೆ, ಒಂದು ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡದ ಸಂಸದರನ್ನು ‘ನಿಷ್ಕ್ರಿಯ’ ಮತ್ತು ಕೆಂಪು ಎಂದು ಟ್ಯಾಗ್ ನೀಡಲಾಗಿತ್ತು. ಒಂದು ತಿಂಗಳಲ್ಲಿ 0-60 ಪೋಸ್ಟ್‌ಗಳನ್ನು ಹೊಂದಿರುವವರನ್ನು ‘ಕಡಿಮೆ ಸಕ್ರಿಯ’ ಮತ್ತು ಹಳದಿ ಎಂದು ಟ್ಯಾಗ್ ಮಾಡಲಾಗಿತ್ತು. 60 ಕ್ಕೂ ಹೆಚ್ಚು ಪೋಸ್ಟ್ ಮಾಡಿದವರನ್ನು ‘ಸಕ್ರಿಯ’ ಮತ್ತು ಹಸಿರು ಎಂದು ಟ್ಯಾಗ್ ಮಾಡಲಾಗಿತ್ತು.
ಕಾರ್ಯಾಗಾರದ ಸಮಯದಲ್ಲಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಪ್ರಸ್ತುತಿ ನೀಡಿದರು.














