Saturday, March 7, 2026
ಉಡುಪಿಕುಂದಾಪುರಜಿಲ್ಲೆಸುದ್ದಿ

ರಿಕ್ಷಾ ನಿಲ್ದಾಣಕ್ಕೆ ಹಾಕಲಾದ ಮೇಲ್ಚಾವಣಿ ಉದ್ಘಾಟಿಸಿದ :ಶಾಸಕ ಎ.ಕಿರಣ್ ಕೊಡ್ಗಿ -ಕಹಳೆ ನ್ಯೂಸ್

ಕುಂದಾಪುರ ನಗರದ ಹೃದಯ ಭಾಗದಲ್ಲಿರುವ ಶಾಸ್ತ್ರಿ ಸರ್ಕಲ್ಲಿನ ರಿಕ್ಷಾ ನಿಲ್ದಾಣಕ್ಕೆ ದಾನಿಗಳು ಹಾಗೂ ಶಾಸಕರ ಅನುದಾನದಿಂದ ಹಾಕಲಾದ ಮೇಲ್ಛಾವಣಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ದಾನಿಗಳಾದ ದಿನೇಶ್ ಶೇರೆಗಾರ್ ದಿನೇಶ್ ಪ್ರಿಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರಾಜಾಜಿನಗರ ಬೆಂಗಳೂರು ಇವರು ಜೊತೆಯಾಗಿ ಉದ್ಘಾಟಿಸಿ ದೀಪವನ್ನು ಪ್ರಜ್ವಲಿಸಿ ದಾನಿಗಳಿಗೆ ಅಭಿನಂದಿಸಿ ಮಾತನಾಡಿದ ಅವರು ರಿಕ್ಷಾ ಚಾಲಕರು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರ ಲೈಟು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಶಾಸಕರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಪುರಸಭೆಯ ಅಧ್ಯಕ್ಷ ಮೋಹನ್ ದಾಸ್ ಶೆಣೈ ವಹಿಸಿ ಶಾಸಕರಿಗೂ ಹಾಗೂ ದಾನಿಗಳಿಗೂ ಕೃತಜ್ಞತೆಯ ನುಡಿಗಳನ್ನು ನಾಡಿದರು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕುಂದಾಪುರ ಪುರಸಭಾ ಉಪಾಧ್ಯಕ್ಷೆ ಶ್ರೀಮತಿ ವನಿತಾ ಬಿಲ್ಲವ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಸದಸ್ಯರಾದ ಶೇಖರ್ ಪೂಜಾರಿ, ಅಶ್ವಿನಿ ಪ್ರದೀಪ್, ಪ್ರಭಾವತಿ ಶೆಟ್ಟಿ, ಶ್ರೀಧರ್ ಶೇರಿಗಾರ್, ಸಂತೋಷ್ ಶೆಟ್ಟಿ, ಪುರಸಭಾ ಇಂಜಿನಿಯರ್ ಗುರುಪ್ರಸಾದ್, ಕುಮಾರಿ ಮೇಘನಾ, ಗಣೇಶ್ ಜನ್ನಾಡಿ, ಹಾಗೂ ಪುರಸಭಾ ನಾಮನಿರ್ದೇಶಕ ಸದಸ್ಯರು ವಿವಿಧ ಪಕ್ಷದ ಮುಖಂಡರು, ನಿಲ್ದಾಣದ ಆಟೋ ಚಾಲಕರು ಮತ್ತು ನಾಗರಿಕರು ಉಪಸ್ಥಿತರಿದ್ದರು.