ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನ ಮನ ಗೆದ್ದ ಪುತ್ತೂರಿನ ಮಧುಮಿತಾ ರಾವ್ ಪಡುಮಲೆ ವೀಣಾ ವಾದನ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಂಗಳೂರು/ ಪುತ್ತೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುತ್ತೂರಿನ ಮಧುಮಿತಾ ರಾವ್ ಪಡುಮಲೆ ವೀಣಾ ವಾದನ ಕಾರ್ಯಕ್ರಮ ಜನ ಮನ ಗೆದ್ದಿದೆ.
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇವರು ವೀಣಾ ವಾದನ ಜನರ ಹೆಚ್ಚಿಗೆಗೆ ಪಾತ್ರವಾಯಿತು.

ಮಧುಮಿತಾ ರಾವ್ ಅವರು ಪುತ್ತೂರಿನ ವೀಣಾವಾದನದ ತರಗತಿಗಳನ್ನು ಮಾಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ಇವರ ಬಳಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇವರು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, ಆಪಾರ ಜನಮನ್ನಣೆಗೆ ಪಾತ್ರವಾಗಿದ್ದಾರೆ.

ಇತ್ತಿಚೆಗೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ವೈಣಿಕ ವಿದ್ವಾನ್ ಆರ್.ಕೆ. ಪದ್ಮನಾಭ ಮೈಸೂರು ಅವರ ಶಿಷ್ಯಯಾಗಿದ್ದಾರೆ.














