ವಿಟ್ಲ,ಚಂದಳಿಕೆ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯಾಗಿ ಪ್ರಸ್ತುತ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ನಾಗೇಶ್ ಕುಲಾಲ್ ಕೊಲ್ಯ ಇವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವತಿಯಿಂದ ಸಹಾಯಧನ ಹಸ್ತಾಂತರ -ಕಹಳೆ ನ್ಯೂಸ್

ವಿಟ್ಲ: ಚಂದಳಿಕೆ ಸಮೀಪ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯಾಗಿ ಪ್ರಸ್ತುತ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ನಾಗೇಶ್ ಕುಲಾಲ್ ಕೊಲ್ಯ ಇವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವತಿಯಿಂದ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಕೋಶಾಧಿಕಾರಿ ರೂಪೇಶ್ ನಾಯ್ಕ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಬಿಜೆಪಿ ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ಟ್ರಸ್ಟಿನ ವಿಟ್ಲ ಘಟಕದ ಕಾರ್ಯದರ್ಶಿ ವಿನೋದ್ ಕೂಡೂರು, ಪ್ರಮುಖರಾದ ರಘುರಾಮ್ ರೈ, ಹರೀಶ್ ಪೂಜಾರಿ ಮರುವಾಳ, ಶ್ರೀಕಾಂತ್ ಆಚಾರ್ ಹಿಂದಾರು , ಮನೀಶ್ ಕುಲಾಲ್, ಶರತ್ ಎನ್ಎಸ್, ರವಿಶಂಕರ್ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ರಾಜ್‍ಕುಮಾರ್ ಶೆಟ್ಟಿ, ರವಿವರ್ಮ, ಧನಂಜಯ ನೆಕ್ಕರೆಕಾಡು, ರಕ್ಷಿತ್ ರೈ ಚಂದಳಿಕೆ, ಪ್ರೀತಮ್ ಶೆಟ್ಟಿ ನಿಡ್ಯ ಉಪಸ್ಥಿತರಿದ್ದರು.














