ಬಲ್ನಾಡ್ : ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಪ್ರಶಸ್ತಿ -ಕಹಳೆ ನ್ಯೂಸ್

ಪುತ್ತೂರು : ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ವತಿಯಿಂದ 2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಸಾಧನೆಗೈದ ಹಾಲು ಉತ್ಪಾದಕರ ವ್ಯವಹಾರದಲ್ಲಿ ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಬಲ್ನಾಡ್ ಪುತ್ತೂರು ತಾಲೂಕು ಇವರಿಗೆ ಅತ್ಯುತ್ತಮ ಸಾಧನೆ ಪ್ರಶಸ್ತಿ ಲಭಿಸಿದೆ.
ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷರಾದ ಪೂರ್ಣಿಮಾ ಚೆನ್ನಪ್ಪ ಮತ್ತು ಕಾರ್ಯದರ್ಶಿ ರೇಖಾ ರಮೇಶ್ ಬ್ರಹ್ಮರಕೋಡಿ ಇವರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸನ್ಮಾನಿಸಿದರು.














