Saturday, March 7, 2026
ಅಂಕಣಸುದ್ದಿ

ಪೊಲೀಸ್‌ ಅಧಿಕಾರಿಗಳನ್ನೂ ಬಿಡದ ಸೈಬರ್‌ ವಂಚಕರು ; ಕೆಜಿಎಫ್‌ ಎಸ್ಪಿ ಫೇಸ್‌ಬುಕ್‌, ಇನ್‌ಸ್ಟಾ ಖಾತೆ ನಕಲು-ಕಹಳೆ ನ್ಯೂಸ್

ಕೋಲಾರ: ಕೆಜಿಎಫ್ ಎಸ್‌ಪಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆ ನಕಲು ಮಾಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್ಪಿ ಶಿವಾಂಶು ರಜಪೂತ್ ಅವರ ಭಾವಚಿತ್ರ ಇರುವ ಜಿಲ್ಲಾ ಪೊಲೀಸ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯನ್ನು ನಕಲು ಮಾಡಿದ್ದಾರೆ. ನಕಲಿ ಖಾತೆಯನ್ನು ಎಸ್‌ಪಿ-ಕೆಜಿಎಫ್ ಹೆಸರಿನಲ್ಲಿ ತೆರೆದಿರುವ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯನ್ನೂ ಬಿಟ್ಟಿಲ್ಲ.

ಜಾಹೀರಾತು
ಜಾಹೀರಾತು

ಸದ್ಯ ನಕಲಿ ಖಾತೆಯನ್ನು 119 ಮಂದಿ ಫಾಲೋ ಮಾಡುತ್ತಿದ್ದು, ಈಗಾಗಲೇ 22 ಫಾಲೋವರ್ಸ್ ಇದ್ದಾರೆ. ಈ ಖಾತೆಯನ್ನು ಬ್ಲ್ಯಾಕ್ ಮಾಡಬೇಕು. ಯಾರೂ ಸಹ ಈ ಖಾತೆಯನ್ನು ಫಾಲೋ ಮಾಡಬಾರದೆಂದು ಕೆಜಿಎಫ್ ಪೊಲೀಸರು ಮನವಿ ಮಾಡಿದ್ದು, ಎಸ್‌ಪಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.

ಈಚೆಗೆ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಇಲಾಖೆ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಇಲಾಖೆಗೆ ಫೇಕ್ ಕಾಟ ಶುರುವಾಗಿದೆ. ಸದ್ಯ ಐಪಿಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನೂ ಬಿಡದೇ ಕಳ್ಳರು ಕೈಚಳಕ ತೋರುತ್ತಿದ್ದಾರೆ.