Wednesday, March 11, 2026
ಕ್ರೈಮ್ಸುದ್ದಿ

ಕಾರು ಅಪಘಾತ ; ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ಜೈಪುರ್‌: ಉದಯಪುರದ ಅಂಬೆರಿ ಬಳಿ ಉದಯಪುರ-ರಾಜ್ಸಮಂದ್ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ  ರಾಜಸ್ಥಾನದ  ರಾಜಸಮಂದ್‌ನ ಬಿಜೆಪಿ  ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ  ಅವರ ಪಕ್ಕೆಲಬು ಮುರಿತವಾಗಿದೆ. ಈ ಅಪಘಾತದಲ್ಲಿ ಅವರ ಆಪ್ತ ಸಹಾಯಕ ಮತ್ತು ಚಾಲಕ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಾಜಸಮಂದ್‌ನಿಂದ ಬರುತ್ತಿದ್ದ ಮಹೇಶ್ವರಿ ಅವರ ಕಾರು ಅಂಬೆರಿ ಬಳಿ ಗುಜರಾತ್ ನೋಂದಾಯಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಾಸಕಿಗೆ ಪಕ್ಕೆಲಬು ಮುರಿದಿದೆ. ಅವರ ಆಪ್ತ ಸಹಾಯಕ ಜೈ ಮತ್ತು ಚಾಲಕ ಧರ್ಮೇಂದ್ರ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಗಾಯಾಳುಗಳನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್ ನೋಂದಾಯಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.