ಬುರುಡೆ ಗ್ಯಾಂಗ್ ತಿಮರೋಡಿ, ಮಟ್ಟಣ್ಣ, ಸಮೀರ್ ಸೇರಿದಂತೆ 292 ಯೂಟ್ಯೂಬರ್ಸ್ ಹಾಗೂ ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ನ್ಯಾಯಾಲಯ ಬಿಗ್ ಶಾಕ್ ; ವಿಡಿಯೋಗಳಿಗೆ ತಡೆಯಾಜ್ಞೆ, ಡಿಲೀಟ್ ಮಾಡಲು ಖಡಕ್ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು : ಬುರುಡೆ ಗ್ಯಾಂಗ್ ಮಾಡಿರುವ ಅವಹೇಳನಾಕಾರಿ ವಿಡಿಯೋಗಳಿಗೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಮಾನಹಾನಿಕರ ವಿಡಿಯೋ ಪ್ರಕಟಿಸಿದಂತೆ ಡಿ. ಹರ್ಷೇಂದ್ರ ಕುಮಾರ್ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಮೊರೆಹೋಗಿದ್ದರು, ಅವರಿಗೆ ನ್ಯಾಯಾಲಯ ಏಕಪಕ್ಷೀಯ ತಡೆಯಾಜ್ಞೆ ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಥರ್ಡ್ ಐ ಯೂಟ್ಯೂಬ್ ಚಾನಲ್ ಇದೊಂದು ಗ್ಯಾಗ್ ಆರ್ಡರ್ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಎಸ್.ಎಲ್.ಪಿ ಸಲ್ಲಿಸಿತ್ತು, ಆದರೆ ಸುಪ್ರೀಂ ಈ ವಿಷಯವನ್ನು ಹೈಕೋರ್ಟ್ ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಲು ಮೌಕಿಕ ಸೂಚನೆ ನೀಡಿತ್ತು. ಇದಾದ ಬಳಿಕ ಹೈಕೋರ್ಟ್ ನಲ್ಲಿ ಕುಡ್ಲ ರ್ಂ ಪೇಜ್ ರಿಟ್ ಸಲ್ಲಿಸಿತ್ತು, ಇದನ್ನು ಪುರಸ್ಕೃರಿಸಿದ ಹೈಕೋರ್ಟ್ ಏಕಪಕ್ಷೀಯ ಆದೇಶವನ್ನ ವಜಾ ಗೊಳಿಸಿ ಮರುತನಿಖೆ ನಡೆಸುವಂತೆ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.
ಸದರಿ ಆದೇಶದ ವಿರುದ್ಧ ಹರ್ಷೇಂದ್ರ ಕುಮಾರ್ ಸುರ್ಪಿಂ ಕೋರ್ಟಿನಲ್ಲ ದಾವೆ ಹೂಡಿ, ಸದರಿ SLP ಯಲ್ಲಿ ದಾಖಲೆಗಳ ಆದಾರದಲ್ಲಿ ಮತ್ತು ಹೈ ಕೋರ್ಟ್ ನ ಆದೇಶವನ್ನು ಪರಿಗಣಿಸದೆ ಎರಡು ವಾರಗಳಲ್ಲಿ ಪುನಃ ಪರಿಶೀಲಿಸಿ ಆದೇಶ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು.
ಬರೋಬರಿ ಐದು ದಿನ ವಾದ – ವಿವಾದ ಆಲಿಸಿದ ಸಿಟಿ ಸಿವಿಲ್ ಕೋರ್ಟ್ ಡಿ. ಹರ್ಷೇಂದ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಸೇರಿದಂತೆ ಅನೇಕರು ಮಾನಹಾನಿಕರ ಮಾತನಾಡಿರುವ ವಿಡಿಯೋಗಳನ್ನು ತೆರೆದ ನ್ಯಾಯಾಲಯದಲ್ಲಿ ವೀಕ್ಷಿಸಿ, ತಡೆಯಾಜ್ಞೆ ನೀಡಿದೆ. ಬುರುಡೆ ಕೇಸ್ ನೆಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಹಾಗೂ ಡಿ. ಹರ್ಷೇಂದ್ರ ಕುಮಾರ್ ಹಾಗೂ ಹೆಗ್ಗಡೆಯವರ ಕುಟುಂಬಸ್ಥರ ವಿರುದ್ಧ ಯಾವುದೇ ಅವಹೇಳನಾಕಾರಿ ಮಾತುಗಳನ್ನು ಆಡದಂತೆ ಖಡಕ್ ಸೂಚನೆ ನೀಡಿ ಮಾತ್ರವಲ್ಲದೇ ವಿಡಿಯೋಗಳನ್ನು ತಕ್ಷಣವೇ ಡಿಲಿಟ್ ಮಾಡಲು ಆದೇಶ ಮಾಡಿದೆ.
ಡಿ. ಹರ್ಷೇಂದ್ರ ಕುಮಾರ್ ಪರ ಹೈಕೋರ್ಟ್ ನ್ಯಾಯವಾದಿ ರಾಜಶೇಖರ ಹಿಲ್ಯಾರ್ ಸುಧೀರ್ಘ ವಾದ ಮಂಡಿಸಿದರು.














