ಖ್ಯಾತ ಚಿತ್ರ ನಟ ಸುಮನ್ ತಲ್ವಾರ್ ಮೊತ್ತ ಮೊದಲ ಬಾರಿಗೆ ತುಳುವಿನಲ್ಲಿ ಅಭಿನಯಿಸಿರುವ ನೆತ್ತರೆಕೆರೆ ಸಿನಿಮಾ ಆಗಸ್ಟ್ 29ರಂದು ರಿಲೀಸ್ – ಕಹಳೆ ನ್ಯೂಸ್

ಮಂಗಳೂರು: ಖ್ಯಾತ ಚಿತ್ರ ನಟ ಸುಮನ್ ತಲ್ವಾರ್ ಇದುವರೆಗೆ 800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಮೊತ್ತ ಮೊದಲ ಬಾರಿಗೆ ತುಳುವಿನಲ್ಲಿ ಅಭಿನಯಿಸಿರುವ ಚಿತ್ರವಾಗಿದೆ ಎಂದು ನೆತ್ತರಕೆರೆ ಚಲನಚಿತ್ರದ ನಿರ್ದೇಶಕ, ನಟ ಸ್ವರಾಜ್ ಶೆಟ್ಟಿ ಹೇಳಿದ್ದಾರೆ.
ಚಿತ್ರದ ಕುರಿತಾಗಿ ಮಾತನಾಡಿದ ಅವರು, ಆಗಸ್ಟ್ 29ರಂದು ಈ ಚಿತ್ರ ಬಿಡುಗಡೆಯಾಗಲಿದೆ. ನೆತ್ತರಕೆರೆ ಎನ್ನುವ ಊರಿನಲ್ಲಿ ನಡೆಯುವ ಕಥೆಯನ್ನು ಆಧರಿಸಿ ಸಿನೆಮಾ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರಿಗೂ ಇದಕ್ಕೂ ಏನೂ ಸಂಬಂಧ ಇಲ್ಲ. ಕೇವಲ ಹೆಸರನ್ನಷ್ಟೇ ಚಿತ್ರಕ್ಕೆ ಇಡಲಾಗಿದೆ ಎಂದರು.
ಇನ್ನು ಚಿತ್ರದಲ್ಲಿ ಹಲವು ಖ್ಯಾತ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದು, ಉತ್ತಮ ಸಂಗೀತ ನಿರ್ದೇಶನ ನೀಡಿದ್ದಾರೆ. ಹಾಡುಗಳು ಕೂಡಾ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ವಿಜಯಪ್ರಕಾಶ್ ಸಹಿತ ಹಲವು ಖ್ಯಾತ ನಾಮರು ಹಾಡಿದ್ದಾರೆ. ತಂತ್ರಜ್ಞಾನವನ್ನೂ ಕೂಡಾ ಅಷ್ಟೇ ಅದ್ಭುತವಾಗಿ ಬಳಸಿಕೊಳ್ಳಲಾಗಿದೆ ಎಂದರು.
ಚಿತ್ರ ವಿತರಕ ಸಚಿನ್ ಉಪ್ಪಿನಂಗಡಿ ಮಾತನಾಡಿ ಸದ್ಯ ಸು ಫ್ರಂ ಸೋ ಚಲನಚಿತ್ರ ಥಿಯೇಟರ್‌ಗಳಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿರುವುದರಿಂದ ಅದಕ್ಕೆ ತೊಂದರೆ ಮಾಡದಂತೆ ನಮ್ಮ ಈ ಚಿತ್ರವನ್ನು ವಿತರಣೆ ಮಾಡಲಾಗಿದೆ ಎಂದರು. ಈ ಚಿತ್ರ ಮುಂಬೈ, ವಿದೇಶಗಳಲ್ಲೂ ಚಿತ್ರ ತೆರೆ ಕಾಣಲಿದೆ ಎಂದರು. ಒಟ್ಟು 15 ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ ಎಂದರು.
ನೆತ್ತರಕೆರೆ ಸಿನಿಮಾ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ ನೆತ್ತರಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ. ಸಿನಿಮಾದ ಬಗ್ಗೆ, ಪ್ರೇಕ್ಷಕರಲ್ಲಿ ಕಾತರ. ಕುತೂಹಲ ಹೆಚ್ಚಿದೆ ಸಿನಿಮಾಕ್ಕೆ ಚೇಳಾರ್, ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣಗೊಂಡಿದೆ.
ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಹುಭಾಷಾ ತಾರಾ ನಟ ಸುಮನ್ ತಲ್ಮಾರ್. ಲಂಚುಲಾಲ್ ಕೆ ಎಸ್ ಅಭಿನಯಿಸಿದ್ದಾರೆ.

ಸಿನಿಮಾದಲ್ಲಿ ಯುವ ಶೆಟ್ಟಿ, ಪುಷ್ಪರಾಜ್ ಬೊಳೂರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪ್ರಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ ಚಂದ್ರಶೇಖರ ಸಿದ್ಧಕಟ್ಟೆ, ಮನೀಶ್ ಶೆಟ್ಟಿ ಉಪ್ಪಿರ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ, ಇದ್ದಾರೆ.
ಸಿನಿಮಾಕ್ಕೆ, ಚಿತ್ರಕತೆ ನಿರ್ದೇಶನ ಸ್ಮರಾಜ್ ಶೆಟ್ಟಿ, ಕ್ಯಾಮರಾ: ಉದಯ ಬಲ್ಲಾಳ್, ಸಂಗೀತ: ವಿನೋದ್ ರಾಜ್ ಕೋಕಿಲಾ, ಸಂಕಲನ: ಗಣೇಶ್ ನೀರ್ಚಾಲ್, ಸಾಹಸ: ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯುಸರ್ : ಯತೀಶ್ ಪೂಜಾರಿ, ಲೈನ್ ಪ್ರೊಡ್ಯುಸರ್ ವಿಜಯ ಮಯ್ಯ ಪ್ರೊಡಕ್ಷನ್ ಮ್ಯಾನೇಜರ್ ರಾಜೇಶ್ ಕುಡ್ಲ ನಿರ್ದೇಶನ ವಿಭಾಗದಲ್ಲಿ ಅವಿನಾಶ್ ಎಸ್ ಆಪ್ತ, ನೀತ್ ಪೂಜಾರಿ, ಕಾರ್ತಿಕ್ ಜಯಚಂದ್ರನ್, ತುಳಸಿದಾಸ್ ಮಂಜೇಶ್ವರ್, ಮೇಕಪ್ : ಚೇತನ್, ಆರ್ಟ್: ವಿಪಿನ್.
ನೆತ್ತರಕೆರೆ ಸಿನಿಮಾ ಮಂಗಳೂರಿನಲ್ಲಿ ಪಿವಿಆರ್. ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ನಲ್ ನಲ್ಲಿ ಸಿನಿಗ್ಯಾಲಕ್ಕಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ರಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನೆತ್ತರಕೆರೆ ಸಿನಿಮಾ ತೆರೆ ಕಾಣಲಿದೆ.














