Saturday, March 7, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಅಕ್ಷಯ ಕಾಲೇಜಿ ನಲ್ಲಿ ಅದ್ವಯ ಸಾಹಿತ್ಯ ಸಂಘ ದಿಂದ ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ ವಿಚಾರ ಧಾರೆ -ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಅದ್ವಯ ಸಾಹಿತ್ಯ ಸಂಘವು ಕಾಲೇಜಿನ ಆಂತರಿಕ ಗುಣಮಟ್ಟ ದ ಭರವಸೆಯ ಕೋಶ ದ ಸಹಭಾಗಿತ್ವದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ ವಿಚಾರ ಗೋಷ್ಠಿಯನ್ನು ಕಾಲೇಜಿನ ಸಭಾಂಗಣದಲ್ಲಿ ಸಂಘಟಿಸಿತು. ಭಾರತ್ ಬೋಧ್ ಮಾಲ ಇದರ ಉಪನ್ಯಾಸ ಸರಣಿ 14 ರ ಶೀರ್ಷಿಕೆ ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ ಎಂಬ ವಿಷಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷ ರಾದ ಶ್ರೀಮತಿ ಅಶ್ವಿನಿ ಕೊಡಿ ಬೈಲ್ ವಿಚಾರ ಧಾರೆಯನ್ನು ಮಂಡಿಸಿದರು.

ಸಾಹಿತ್ಯ ದ ಅಭಿರುಚಿ ಬೆಳೆಸುವುದು ಮತ್ತು ಪರಿಪೋಷಿಸುವುದರಿಂದ , ಸಾಹಿತ್ಯ ಕ್ಷೇತ್ರದ ಆಳ ಮತ್ತು ವಿಸ್ತಾರವನ್ನು ಕುತೂಹಲದಿಂದ ಅನ್ವೇಷಣೆ ಮಾಡುತ್ತಾ ಹೋದ ಹಾಗೆ ವ್ಯಕ್ತಿತ್ವ ವಿಕಸನದೊಂದಿಗೆ ಸಾಹಿತ್ಯವು ಉತ್ಕೃಷ್ಟ ವಾದ ಅನುಭವವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಡಾ ಶೋಭಿತಾ ಸತೀಶ್, ರಾಷ್ಟ್ರೀಯ ಮಂತ್ರಿ ವಿದ್ಯಾ ಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ( ನೊ) ಅವರು ಶ್ರೀಮತಿ ಅಶ್ವಿನಿ ಕೊಡಿ ಬೈಲ್ ಅವರ ಸಾಹಿತ್ಯ ಕ್ಕೆ ಗಾಯನ ಹಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ರಾದ ಶ್ರೀಯುತ ರಕ್ಷಣ್ ಟಿ ಆರ್ ವಹಿಸಿದ್ದರು. ಅದ್ವಯ ಸಾಹಿತ್ಯ ಸಂಘದ ಸಂಯೋಜಕಿ ಶ್ರೀಮತಿ ಸಾಯಿ ಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳ ಪರಿಚಯ ವನ್ನು ಕನ್ನಡ ವಿಭಾಗದ ಮುಖ್ಯಸ್ಥ ರಾದ ಶ್ರೀಯುತ ಹರಿಶ್ಚಂದ್ರ ನಿರ್ವಹಿಸಿದರು. ಆಂತರಿಕ ಗುಣಮಟ್ಟದ ಭರವಸೆಯ ಕೋಶ ದ ಸಂಯೋಜಕಿ ರಶ್ಮಿ ಕೆ ಉಪಸ್ಥಿತರಿದ್ದರು. ಕುಮಾರಿ ನಿಸ್ಮಿತಾ ಕೆ ಪ್ರಾರ್ಥನೆ ಹಾಡಿ, ಕುಮಾರಿ ಗೀತಾ ವಂದಿಸಿದರು. ಕುಮಾರಿ ಧನ್ಯ ಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು