Friday, March 6, 2026
ಉಡುಪಿಕುಂದಾಪುರಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಸಂಘಟನೆ ಅಗತ್ಯ ಸಂಘಟನೆಗಳ ಕೂಗಿಗೆ ಸರ್ಕಾರ ಹಾಗೂ ಬೇರೆ ಬೇರೆ ಸಂಸ್ಥೆಗಳು ಮನ್ನಣೆ ನೀಡುತ್ತದೆ : ಶಾಸಕ ಎ ಕಿರಣ್ ಕೊಡ್ಗಿ -ಕಹಳೆ ನ್ಯೂಸ್

ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪಡೆದ ಒಳ್ಳೆಯ ಪರಿಕಲ್ಪನೆಯೊಂದಿಗೆ ಸಂಸ್ಥೆಯನ್ನು ಹುಟ್ಟು ಹಾಕಿ ಸಮಾಜಮುಖಿ ಕೆಲಸ ಒಂದು ವೃತ್ತಿ ಬಾಂಧವರ ಹಿತ ಚಿಂತನೆಯೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿರುವುದರಿಂದ ಈ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತಾ ಇಂದು ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ ಬೈಂದೂರು ಭಾಗದ ಫೋಟೋಗ್ರಾಫರ್ ಅಸೋಸಿಯೇಷನ್ ಆಯೋಜಿಸಿದ ಕ್ರೀಡಾಕೂಟವನ್ನ ಕುಂದಾಪುರ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದ ಅವರು ಇವತ್ತು ವೃತ್ತಿಯಲ್ಲಿ ಎಷ್ಟೇ ಸಮಸ್ಯೆ ಪೈಪೋಟಿ ಇರಬಹುದು ಅದನ್ನು ಎಲ್ಲ ಮರೆತು ಒಕ್ಕೂಟವನ್ನು ಮಾಡಿಕೊಂಡು ಸಂಸ್ಥೆಯನ್ನು ಕಟ್ಟಿಕೊಂಡು ಇಡೀ ವ್ಯವಸ್ಥೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕೆನ್ನುವ ನಿಟ್ಟಿನಲ್ಲಿ ತಾವೆಲ್ಲರೂ ಇವತ್ತು ಕ್ರೀಡಾಕೂಟವನ್ನು ಆಯೋಜಿಸಿದ್ದೀರಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಒಂದು ದಿನ ನಾವೆಲ್ಲ ಒಂದೇ ಮನೆಯವರಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ ನಿಮ್ಮ ಸಂಘದ ಒಗ್ಗಟ್ಟನ್ನು ತೋರಿಸಿದ್ದು ಸಂಘಟನೆಗಳು ನಿಜವಾಗಲೂ ಅಗತ್ಯ ಒಬ್ಬೊಬ್ಬರ ಕೂಗು ಯಾರಿಗೂ ಕೂಡ ಕೇಳುವುದಿಲ್ಲ. ಅದೇ ಸಂಘಟನೆಯಲ್ಲಿ ಮಾಡಿದ ಕೂಗಿಗೆ ಸರ್ಕಾರಗಳು ಬೇರೆ ಬೇರೆ ಸಂಸ್ಥೆಗಳು ಮನ್ನಣೆಯನ್ನು ನೀಡುತ್ತದೆ. ಆ ದೆಸೆಯಲ್ಲಿ ಇವತ್ತು ಒಂದು ಒಳ್ಳೆಯ ಕ್ರೀಡಾಕೂಟವನ್ನು ಕುಂದಾಪುರ ಹಾಗೂ ಬೈಂದೂರ ವಲಯ ಸೇರಿ 35 ವರ್ಷಗಳ ಬಳಿಕ ಪ್ರಥಮ ಬಾರಿಗೆ ಕುಂದಾಪುರದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಪ್ರಸಾದ್ ಜೈನ್ ಅಧ್ಯಕ್ಷರು ಎಸ್.ಕೆ.ಪಿ.ಎ. ದಕ್ಷಿಣ ಕನ್ನಡ ಉಡುಪಿ ಕ್ರೀಡಾ ಜ್ಯೋತಿಯ ಪುರ ಮೆರವಣಿಗೆಗೆ ಚಾಲನೆಯನ್ನು ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಅಧ್ಯಕ್ಷರು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ವಹಿಸಿದರು.

ಸದ್ರಿ ಈ ಕಾರ್ಯಕ್ರಮದಲ್ಲಿ ರಮೇಶ್ ದೇವಾಡಿಗ ವಂಡ್ಸೆ ಉದ್ಯಮಿ ಬೆಂಗಳೂರು.ದಿವಾಕರ ಶೆಟ್ಟಿ ಅಧ್ಯಕ್ಷರು ಎಸ್.ಕೆ.ಪಿ.ಎ. ಕುಂದಾಪುರ ಬೈಂದೂರ ವಲಯ,.ಕರುಣಾಕರ ಕಾನಂಗಿ ಸಂಚಾಲಕರು ಎಸ್ ಕೆ ಪಿ ಎ ದಕ್ಷಿಣ ಕನ್ನಡ ಉಡುಪಿ..ದಯಾನಂದ ಬಂಟ್ವಾಳ ಪ್ರಧಾನ ಕಾರ್ಯದರ್ಶಿ ಎಸ್ ಕೆ ಪಿ ಎ ದಕ್ಷಿಣ ಕನ್ನಡ ಉಡುಪಿ. ವಾಸುದೇವರಾವ್ ಅಧ್ಯಕ್ಷರು ಸೌತ್ ಕೆನರಾ ಫೋಟೋಗ್ರಾಫರ್ ವಿವಿಧೋದ್ದೇಶ ಸಹಕಾರಿ ಸಂಘ.ಆನಂದ್ ಬಂಟ್ವಾಳ ಅಧ್ಯಕ್ಷರು ಕಟ್ಟಡ ಸಮಿತಿ ಎಸ್ ಕೆ ಪಿ ಎ.ರಂಜಿತ್ ಮೆಂಡನ್ ಕ್ರೀಡಾ ಕಾರ್ಯದರ್ಶಿ ಎಸ್‌ಕೆಪಿಎ ದಕ್ಷಿಣ ಕನ್ನಡ ಉಡುಪಿ.ಭಾರದ್ವಾಜ್ ಕಾರ್ಯದರ್ಶಿ ಎಸ್ ಕೆಪಿಎ ದಕ್ಷಿಣ ಕನ್ನಡ ಉಡುಪಿ..ಹಾಗೂ ಕುಂದಾಪುರ ಮತ್ತು ಬೈಂದೂರು ವಲಯದ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.