ಆ.27 ಮತ್ತು 28 ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಇದರ ವತಿಯಿಂದ 23ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಇದರ ವತಿಯಿಂದ ಆ.27 ಮತ್ತು 28 ರಂದು ಶ್ರೀ ದುರ್ಗಾ ಭಜನಾ ಮಂದಿರ, ಕುಂಜೂರುಪಂಜ ದಲ್ಲಿ 23ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.
ಆ.27 ರಂದು ಬೆಳಗ್ಗೆ ಗಂ.8.ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ ನಂತರ ಗಣಪತಿ ಹವನ ನಡೆಯಲಿದೆ. ನಂತರ ಗಂ.8.30ಕ್ಕೆ ಭಜನಾ ಕಾರ್ಯಕ್ರ ಬಳಿಕ ಸ್ಥಳಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂ. 6.ಕ್ಕೆ ಭಜನಾ ಕಾರ್ಯಕ್ರಮ ನಂತರ ಗಂ.8.30ಕ್ಕೆ ಮಹಾಪುಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಮರುದಿವಸ ಬೆಳಗ್ಗೆ 8.30ಕ್ಕೆ ಭಜನಾ ಕಾರ್ಯಕ್ರ ಮತ್ತು 9.30ಕ್ಕೆ ಗಣಪತಿ ಹವನ ಬಳಿಕ ಧಾರ್ಮಿಕ ಸಭಾ ಕರ್ಯಕ್ರಮ ನಡೆಯಲಿದ್ದು ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.ನಂತರ ಮಧ್ಯಾಹ್ನ 12.ಕ್ಕೆ ಮಹಾಪೂಜೆ, ಪ್ರಸಾದ ವಿಯರಣೆ 12.30ಕ್ಕೆ ಅನ್ನಸಂತರ್ಪಣೆ ನಡೆಯದೆ. ಸಂಜೆ 4.ಗಂಟೆಗೆ ಕುಣಿತ ಭಜನೆಯೊಂದಿಗೆ ಶೋಭಾಯಾತ್ರೆ ಮತ್ರು ವಿಸರ್ಜನೆ ಕರ್ಯಕ್ರಮ ನಡೆಯಲಿದೆ.














