ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ : ವಿಶೇಷ ಉಪನ್ಯಾಸ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಂಶತಿ ವರ್ಷದ ಪ್ರಯುಕ್ತ ಭಾಂದವ್ಯಗಳ ಬಂಧನ ಎಂಬ ಶೀರ್ಷಿಕೆ ಅಡಿಯಲ್ಲಿ ಪೋಷಕರಿಗೆ ವಿಶೇಷ ಉಪನ್ಯಾಸ ನಡೆಯಿತು. ಅತಿಥಿ ಅಭ್ಯಾಗತರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾದ ಶ್ರೀ ಎನ್ . ಆರ್ ದಾಮೋದರ ಶರ್ಮ ಖ್ಯಾತ ವಾಗ್ಮಿಗಳು ಶ್ರೀ ನವಾಕ್ಷರಿ ಬಾರ್ಕೂರು, ಉಡುಪಿ, ಮಕ್ಕಳ ಹಾಗೂ ಪೋಷಕರ ನಡುವಿನ ಭಾಂದವ್ಯದ ಬಗ್ಗೆ ಮಾತನಾಡಿದರು. ನಾವೆಲ್ಲರೂ ಮೊದಲಾಗಿ ಭಾರತೀಯ ಪರಂಪರೆಯನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು, ಬದುಕಿನಲ್ಲಿ ಆತ್ಮ ವಿಶ್ವಾಸದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ನಮ್ಮ ಬದುಕು ಎಂಬುವುದು ನಮ್ಮ ಪರಂಪರೆ. ಭಾರತದಲ್ಲಿ ಹುಟ್ಟಿರುವ ಸಾರ್ಥಕತೆಯ ಮನೋಭಾವನೆ ನಮ್ಮಲ್ಲಿರಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ/ ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ಬಿ. ನಾರಾಯಣ ಸೋಮಯಾಜಿ , ಸಂಚಾಲಕರಾದ ಶ್ರೀ ವಸಂತ ಮಾಧವ , ಪ್ರಾಚಾರ್ಯರಾದ ವಸಂತ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಕುಮಾರಿ ಶ್ವೇತ ನಿರ್ವಹಿಸಿದರು.














