ಕಲ್ಲಡ್ಕ ಫ್ಲೈಓವರ್ ನಲ್ಲಿ ಹಿಟ್ ಎನ್ ರನ್..! ನಶೆಯಲ್ಲಿದ್ದ ಪುತ್ತೂರು ಮೂಲದ ಯುವಕರು – ಕಹಳೆ ನ್ಯೂಸ್

ಬಂಟ್ವಾಳ : ನಿನ್ನೆ ಸಂಜೆ ಸುಮಾರು 7 ಗಂಟೆಗೆ ಕಲ್ಲಡ್ಕ ಫ್ಲೈಓವರ್ ನಲ್ಲಿ ಎದ್ವತದ್ವವಾಗಿ ಬಂದ I20 ಕಾರೊಂದು ಎದುರಿನಲ್ಲಿ ಹೋಗುತಿದ್ದ ಕಾರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.
ಕಾರ್ ನಲ್ಲಿದ್ದವರು ಪುತ್ತೂರು ಮೂಲದ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಮನ್ಸೂರ್ ಮತು ಮತ್ತಿಬ್ಬರು ಎಂದು ಮಾಹಿತಿ ತಿಳಿದು ಬಂದಿದೆ

ರೆಂಟ್ ಕಾರೊಂದನ್ನು ಪಡೆದ ಬೆಂಗಳೂರಿನಲ್ಲಿರುವ ಇಬ್ರಾಹಿಂ ಮನ್ಸೂರ ಊರಿಗೆ ಬಂದು ತನ್ನ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದು ವಾಪಾಸಾಗುತ್ತಿದ್ದ ಸಮಯದಲ್ಲಿ ಬಿಸಿರೋಡ್ ಟೋಲ್ಗೇಟ್ ನಿಂದಲೆ ಕಾರನ್ನು ಒಟ್ಟಾರೆಯಾಗಿ ಚಾಲಾಯಿಸುತಿದ್ದು ಕಲ್ಲಡ್ಕ ಫ್ಲೈ ಓವರ್ ನಲ್ಲಿ ಎದುರಿನಿಂದ ಹೋಗುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೆಂಪು ಬಣ್ಣದ ಐ20 ಕಾರ್ ನಲ್ಲಿದ್ದ ಪುತ್ತೂರು ಮೂಲದ ಯುವಕರು ನಶೆಯಲ್ಲಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಈ ಬಗ್ಗೆ ಡಿಕ್ಕಿ ಹೊಡೆದು ಕಾರು ಮಾಲಕರು ಹಿರಿಯ ಪೋಲೀಸ್ ಅದಿಕಾರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.














