Thursday, March 12, 2026
ಜಿಲ್ಲೆಬೆಳ್ತಂಗಡಿಸುದ್ದಿಹೆಚ್ಚಿನ ಸುದ್ದಿ

ನಾಳೆ ಶ್ರೀ ಧರ್ಮಸ್ಥಳದಲ್ಲಿ 31ನೇ ವರ್ಷದ ಜ್ಞಾನ ಪಥ ಮತ್ತು ಜ್ಞಾನ ರಥ 2025ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಹಾಗೂ 22ನೇ ವರ್ಷದ ರಾಜ್ಯ ಮಟ್ಟದ ಅಂಚೆ – ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ – ಕಹಳೆ ನ್ಯೂಸ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶಾಲಾ ಶಿಕ್ಷಣ ಮತ್ತು ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ 31ನೇ ವರ್ಷದ ಜ್ಞಾನ ಪಥ ಮತ್ತು ಜ್ಞಾನ ರಥ 2025ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಹಾಗೂ 22ನೇ ವರ್ಷದ ರಾಜ್ಯ ಮಟ್ಟದ ಅಂಚೆ – ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭವು ಆ.19 ರಂದು ಮಹೋತ್ಸವ ಸಭಾಭವನ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ.

ಜ್ಞಾನ ಪಥ ಮತ್ತು ಜ್ಞಾನ ರಥ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು ಡಾ| ಡಿ. ವೀರೇಂದ್ರ ಹೆಗ್ಗಡೆಯರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ , ಹಾಗೂ ಗೌರವ ಉಪಸ್ಥಿತಿಯನ್ನು ಶ್ರೀಮತಿ ಹೇಮಾ ವೀ.ಹೆಗ್ಗಡೆಯವರು ಟ್ರಸ್ಟಿ, ಶಾಂತಿವನ ಟ್ರಸ್ಟ್(ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ , ಮತ್ತು ಶ್ರೀ ಡಿ. ಹರ್ಷೆಂದ್ರ ಕುಮಾರ್ ಟ್ರಸ್ಟಿ ಶಾಂತಿವನ ಟ್ರಸ್ಟ್(ರಿ.)ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಉಪಸ್ಥಿಯಲ್ಲಿರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ 22ನೇ ವರ್ಷದ ರಾಜ್ಯ ಮಟ್ಟದ ಅಂಚೆ – ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭದ ಕೃತಿ ಬಿಡುಗಡೆಯನ್ನು ಡಾ.ವಿ.ನಾಗೇಂದ್ರ ಪ್ರಸಾದ್ ರವರು ಚಲನಚಿತ್ರ ಸಾಹಿತಿ ನಿರ್ದೇಶಕರು, ಪ್ರಶಸ್ತಿ ಪುರಸ್ಕೃತರು, ಬೆಂಗಳೂರು ಹಾಗೂ ಪುರಸ್ಕಾರ ಮತ್ತು ಶುಭಾಶಂಸನೆಯನ್ನು ಶ್ರೀ ದತ್ತಣ್ಣರವರು(ದತ್ತಾತ್ರೇಯ ಎಚ್.ಡಿ.) ರಂಗಭೂಮಿ ಕಿರಿತೆರೆ ಹಾಗೂ ಚಲನಚಿತ್ರ ನಟರು, ರಾಷ್ಟçಪ್ರಶಸ್ತಿ ಪುರಸ್ಕತರು, ಬೆಂಗಳೂರು ಹಾಗೆ ಅಭ್ಯಾಗತರು ಶ್ರೀ ಶಶಿಧರ್ ಜಿ.ಎಸ್ ಉಪ ನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ದಕ್ಷಿಣ ಕನ್ನಡ, ಮಂಗಳೂರು ಮತ್ತು ಶ್ರೀ ಲೋಕೇಶ್ ಸಿ. ಉಪ ನಿರ್ದೇಶಕರು (ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಮಣಿಪಾಲ, ಉಡುಪಿ ಇವರು ನೆರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗಾಯನ ಮತ್ತು ನೃತ್ಯ ಸನಾತನ ನಾಟ್ಯಾಲಯ, ಮಂಗಳೂರು ಮತ್ತು ಕುಂಚ ಶ್ರೀ ರಮೇಶ ಸಾಸನೂರು ಉಪನ್ಯಾಸಕರು ಚಿತ್ರಕಲಾ ಮಹಾ ವಿದ್ಯಾಲಯ ಹೂವಿನ ಹಿಪ್ಪರಗಿ, ಬಾಗೇವಾಡಿ, ವಿಜಯಪುರ ಜಿಲ್ಲೆ ಇವರು ನಡೆಸಲಿದ್ದಾರೆ.