Saturday, March 7, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಹುಲಿವೇಷವು ನಾಡಿನ ಹೆಮ್ಮೆಯ ನೃತ್ಯದ ಆಯಾಮವಾಗಿದೆ;ಸ್ಯಾಂಡಲ್ ವುಡ್ ನಟ ಶರಣ್ -ಕಹಳೆ ನ್ಯೂಸ್

ಮಂಗಳೂರು : ನಾಡಿನ ಬಹಳ ಹೆಮ್ಮೆಯ ನೃತ್ಯದ ಆಯಾಮವಾದ ಹುಲಿವೇಷದ ಊದು ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತೋಷವಾಗಿದೆ.ಇಲ್ಲಿಗೆ ನಾನು ಬರೀ ಕಲಾವಿದನಲ್ಲದೆ ಕನ್ನಡಿಗನಾಗಿ ಬಂದಿದ್ದೇನೆ.ನಮ್ಮ ನಾಡಿನಲ್ಲಿ ವಿಭಿನ್ನತೆಯಲ್ಲಿ ಏಕತೆಯನ್ನ ಕಾಣಲು ಮಂಗಳೂರೆ ಸ್ಪಷ್ಟ ನಿದರ್ಶನವಾಗಿದೆಯೆಂದು ಸ್ಯಾಂಡಲ್ ವುಡ್ನ ಖ್ಯಾತ ನಾಯಕನಟ ಶರಣ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ವತಿಯಿಂದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಶುಕ್ರವಾರದಂದು ಕುಂಪಲದ ಆದಿಶಕ್ತಿ ಕ್ಷೇತ್ರದಲ್ಲಿ ನಡೆದ ದ್ವಿತೀಯ ವರ್ಷದ ಹುಲಿವೇಷದ ಸಾಂಪ್ರದಾಯಿಕ ಊದು ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರಿಗೆ ನಾನಾ ಕಾರಣದಿಂದ ಬರುತ್ತಿರುತ್ತೇನೆ.ಮಂಗಳೂರು ಮತ್ತು ನನ್ನ ಮಧ್ಯೆ ದೇವರೇ ಮಾಡಿರುವ ಬೆಸುಗೆಯಾಗಿದೆ.ನನ್ನ ಊರು ಹುಬ್ಬಳ್ಳಿಯಲ್ಲಿದ್ದಷ್ಟೇ ಸ್ನೇಹಿತರು ನನಗೆ ಮಂಗಳೂರಿನಲ್ಲೂ ಇದ್ದಾರೆ.ಪ್ರಕಾಶ್ ಕುಂಪಲ ಅವರು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರೂ ತನ್ನ ಊರಿನ ಅಶಕ್ತರು,ಶಿಕ್ಷಣ ವಂಚಿತರು,ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ,ಇಲ್ಲಿನ ಮಣ್ಣಿನ ಸಂಸ್ಕೃತಿಯ ಹುಲಿವೇಷ ಕುಣಿತಕ್ಕೂ ದೊಡ್ಡ ಕೊಡುಗೆಯನ್ನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೇಕ್ಷಕರ ಅಪೇಕ್ಷೇಯ ಮೇರೆಗೆ ನಟ ಶರಣ್ ಅವರು ಕಾಲಿಗೆ ಧರಿಸಿದ್ದ ಶೂಗಳನ್ನ ಕಳಚಿ ಕಾಂತಾರ ಚಿತ್ರದ ವರಾಹರೂಪಂ ಹಾಡನ್ನ ವೇದಿಕೆಯಲ್ಲಿ ಸುಮಧುರವಾಗಿ ಹಾಡಿ ನೆರೆದವರನ್ನ ರಂಜಿಸಿದರು.

ಜಾಹೀರಾತು
ಜಾಹೀರಾತು

ಉಡುಪಿಯ ಯುವಜನತೆ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಡಾ. ಶೆಟ್ಟಿ, ಕೇವಲ 20ನೇ ವಯಸ್ಸಿನಿಂದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ”ಈ ಶಿಬಿರವು ಯುವಕರಲ್ಲಿ ಹೃದ್ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳು ಹಾಗೂ ಅವುಗಳನ್ನು ತಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ,” ಎಂದು ಹೇಳಿದರು.