Saturday, March 7, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ರಾಜ್ಯಮಟ್ಟಕ್ಕೆ ಆಯ್ಕೆ -ಕಹಳೆ ನ್ಯೂಸ್

ಪುತ್ತೂರು : ಶ್ರೀದೇವಿ ಪ್ರೌಢಶಾಲೆ ಪುಣಚ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ತಂಡದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಭವಿಶ್, ತೇಜಸ್ ಪಿ ಕೆ, ಸೃಜನ್, ಗೌತಮ್, ತರುಣ್, ಮನ್ವಿತ್ ಬಿ ಎಲ್, ವನೀಶ್, ಮಿಥುನ್ ಶೆಟ್ಟಿ, ಪ್ರೇಕ್ಷಿತ್, ತರುಣ್ ಕುಮಾರ್ ಬಿ ಆರ್, ದೇಶ್ಚಿತ್, ಮನ್ವಿತ್ ಕೆ ವಿ, ಲಿಖಿತ್, ಕೀರ್ತನ್, ಸಾತ್ವಿಕ್, ಆಯುಷ್ ಭಾಗವಹಿಸಿದರು. ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ. ಎಸ್, ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತದೆ. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು