ಉಜಿರೆಯಲ್ಲಿ ಸುವರ್ಣ ನ್ಯೂಸ್ ನ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣ ಅವರ ತಂಡದಿಂದ ಹಲ್ಲೆ – ಕಹಳೆ ನ್ಯೂಸ್

ಬೆಳ್ತಂಗಡಿ: ಉಜಿರೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ , ಗಿರೀಶ್ ಮಟ್ಟಣ್ಣ ಹಾಗೂ ಸಮೀರ್ ಎಂ.ಡಿ. ಇವರಿಂದ ಪ್ರೇರೆಪಿತಗೊಂಡ 50ಕ್ಕೂ ಹೆಚ್ಚಿನ ತಂಡ ಸೇರಿ ರಾಜ್ಯದ ಪ್ರಮುಖ ಮಾಧ್ಯಮವಾದ ಸುವರ್ಣ ನ್ಯೂಸ್ ನ ವರದಿಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದ್ದು, ಇದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.














