ಭಾರತೀಯ ಜನತಾ ಪಾರ್ಟಿ ಕುಪ್ಪೆಪದವು ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ -ಕಹಳೆ ನ್ಯೂಸ್

ಮಂಗಳೂರು : ಭಾರತೀಯ ಜನತಾ ಪಾರ್ಟಿ ಕುಪ್ಪೆಪದವು ಶಕ್ತಿ ಕೇಂದ್ರದ ಹಾಗೂ ಬೂತ್ ಸಮಿತಿಗಳ ಪದಾಧಿಕಾರಿಗಳ ಆಯ್ಕೆಯು ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲಿಯಾನ್ ಇವರ ಅಧ್ಯಕ್ಷತೆಯಲ್ಲಿ ಕುಪ್ಪೆಪದವು ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ನಡೆಯಿತು.
ಕುಪ್ಪೆಪದವು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಉಳಿಪಾಡಿ ಗುತ್ತು. ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ ರಾಮಡ್ಕ. ಸದಸ್ಯರಾಗಿ ಸಂಜೀವ ಪೂಜಾರಿ ಶ್ರೀನಿಕೇತನ. ಶ್ರೀನಿವಾಸ ಶೆಟ್ಟಿ ಕಟ್ಟೆಪುನಿ. ಅಶೋಕ ಕಟ್ಟೆಮಾರ್ ಬಲಿ. 202 ಕಲ್ಲಾಡಿ ಬೂತಿನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ನೀಲಿ. ಕಾರ್ಯದರ್ಶಿಯಾಗಿ ಸಂತೋಷ್ ಪೂಜಾರಿ ಕಾಫಿಕಾಡ್. ಅಶೋಕ್ ಕಲ್ಲಾಡಿ. 203ದೊಡ್ಡಲಿಕೆ ಬೂತಿನ ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ದೊಡ್ಡಳಿಕೆ, ಕಾರ್ಯದರ್ಶಿ ಜಯಂತ ದೊಡ್ಡಲಿಕೆ, 204 ಕುಪ್ಪೆಪದವು ಬೂತಿನ ಅಧ್ಯಕ್ಷರಾಗಿ ಹರಿಶ್ಚಂದ್ರ ಕಜೆ, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಆಚಾರಿ ಕೆಂಪುಗುಡ್ಡೆ.205 ಕುಪ್ಪೆಪದವು ಬೂತಿನ ಅಧ್ಯಕ್ಷರಾಗಿ ವಿಕ್ರಂ ಭಟ್ ಕಾರ್ಯದರ್ಶಿಯಾಗಿ ನಾರಾಯಣ ಸುವರ್ಣ ಬನದಬಳಿ. ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲಿಯಾನ್ ಪಕ್ಷದ ಜವಾಬ್ದಾರಿ ವಹಿಸಿದ ಎಲ್ಲಾ ಪದಾಧಿಕಾರಿಗಳು ಇಂದಿನಿಂದಲೇ ಪಕ್ಷದ ಕೆಲಸಗಳನ್ನು ಪ್ರಾರಂಭ ಮಾಡಬೇಕು. ಈ ಭಾಗದ ಎಲ್ಲಾ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು. ಬಳಿಕ ಮಾತನಾಡಿದ ಮುತ್ತೂರು ಪಂಚಾಯತ್ ಅಧ್ಯಕ್ಷ ಹಾಗೂ ಎಡಪದವು ಮಹಾ ಶಕ್ತಿಕೇಂದ್ರದ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಈ ಭಾಗದಲ್ಲಿ ಮುಂದಿನ ಚುನಾವಣೆಯಲ್ಲಿ ಕುಪ್ಪೆಪದವು ಗ್ರಾಮ ಪಂಚಾಯಿತಿನಲ್ಲಿ ಮುಂದಿನ ಬಾರಿ ಭಾರತೀಯ ಜನತಾ ಪಾರ್ಟಿಯನ್ನು ನಾವೆಲ್ಲರೂ ಸೇರಿ ಆದಿಕಾರಕ್ಕೆ ತರಬೇಕು. ತಲಾ 4 ಬೂತಿನ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಕಾರ್ಯಕರ್ತರು ಸೇರಿ ಪ್ರತಿ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿ ಪ್ರತಿ ತಿಂಗಳು ಮೀಟಿಂಗ್ ನಡೆಸಿ ಶಕ್ತಿಕೇಂದ್ರಕ್ಕೆ ವರದಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತ ಬಜರಂಗದಳ ಗುರುಪುರ ಪ್ರಖಂಡದ ಉಪಾಧ್ಯಕ್ಷ ವಿಶ್ವನಾಥ ಪಾಕಜೆ ಕುಪ್ಪೆಪದವು ಪಂಚಾಯತ್ ಸದಸ್ಯ ನಿತೇಶ್ ದೊಡ್ಡಳಿಕೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ ಸಿ ಮೋರ್ಚದ ಉಪಾಧ್ಯಕ್ಷ ಗಣೇಶ್ ಪಾಕಜೆ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.














