Recent Posts

Tuesday, March 10, 2026
ಜಿಲ್ಲೆರಾಜ್ಯಸುದ್ದಿಹೆಚ್ಚಿನ ಸುದ್ದಿ

ವಾರಣಾಸಿಯಲ್ಲಿ ₹2,183 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ -ಕಹಳೆ ನ್ಯೂಸ್

ವಾರಣಾಸಿ: ವಾರಣಾಸಿಯಲ್ಲಿ ₹2,183 ಕೋಟಿ ವೆಚ್ಚದ 52 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೆರವೇರಿಸಿದ್ದಾರೆ.

ವಾರಣಾಸಿ ಸಮೀಪದ ಸೇವಾಪುರಿ ಬ್ಲಾಕ್‌ನಲ್ಲಿರುವ ಬನೌಲಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

‘ವಾರಣಾಸಿಯ ಎಲ್ಲಾ ಕುಟುಂಬಗಳಿಗೂ ನನ್ನ ನಮಸ್ಕಾರಗಳು..’ ಎಂದು ಪ್ರಧಾನಿ ಮೋದಿ ಅವರು ಭಾಷಣ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು

ರಸ್ತೆ ನಿರ್ಮಾಣ, ಆರೋಗ್ಯ, ಶಿಕ್ಷಣ, ಕ್ರೀಡೆ, ಪ್ರವಾಸೋದ್ಯಮ ಹಾಗೂ ನಗರಾಭಿವೃದ್ದಿ ಸೇರಿದಂತೆ 52 ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಇದೇ ವೇಳೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ₹20,500 ಕೋಟಿ ವೆಚ್ಚದಲ್ಲಿ ದೇಶದಾದ್ಯಂತವಿರುವ 9.70 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿಯ 20ನೇ ಕಂತನ್ನು ಪಾವತಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಡಿಸಿಎಂ ಕೇಶವ್‌ ಪ್ರಸಾದ್‌, ಬ್ರಜೇಶ್ ಪಾಠಕ್, ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇದುವರೆಗೂ ವಾರಣಾಸಿ ಕ್ಷೇತ್ರಕ್ಕೆ 51 ಸಲ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಕಾಶಿ ಘಟಕದ ಮುಖ್ಯಸ್ಥ ದಿಲೀಪ್‌ ಪಾಟೀಲ್‌ ತಿಳಿಸಿದ್ದಾರೆ.