ಆಳ್ವಾಸ್ ಉದ್ಯೋಗ ಮೇಳ ಮೊದಲ ದಿನ ಪುತ್ತೂರಿನಿಂದ ೪೫೦ ಮಂದಿ ಆಕಾಂಕ್ಷಿಗಳು : ಯುವ ಜನತೆಗೆ ಉದ್ಯೋಗ ಕೊಡಿಸುವುದೇ ಶಾಸಕರ ಉದ್ದೇಶವಾಗಿದೆ: ಸುದೇಶ್ ಶೆಟ್ಟಿ-ಕಹಳೆ ನ್ಯೂಸ್

ಪುತ್ತೂರು: ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಮೊದಲನೇ ದಿನ ೪೫೦ ಮಂದಿ ಆಕಾಂಕ್ಷಿಗಳು ತೆರಳಿದ್ದು, ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸರ್ವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು ಯುವ ಜನತೆಗೆ ಉದ್ಯೋಗ ಕೊಡಿಸುವುದೇ ಶಾಸಕರ ಉದ್ದೇಶವಾಗಿದೆ ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು.
ಅವರು ಪುತ್ತೂರಿನಿಂದ ಆಳ್ವಾಸ್ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ತೆರಳುವ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯುವಜನತೆ ಉದ್ಯೋಗವಿಲ್ಲದೆ ದಾರಿತಪ್ಪಬಾರದು. ಕಷ್ಟಪಟ್ಟು ಪೋಷಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಬ್ಯಾಸವನ್ನು ಕೊಡಿಸುತ್ತರೆ, ವಿದ್ಯೆ ಕಲಿತ ಮಕ್ಕಳು ಉದ್ಯೋಗವಿಲ್ಲದೆ ಮನೆಯಲ್ಲೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಆಳ್ವಾಸ್‌ನಲ್ಲಿ ಪ್ರತೀ ವರ್ಷ ನಡೆಯುವ ಉದ್ಯೋಗ ಮೇಳದಲ್ಲಿ ಸಾವಿರಾರು ಮಂದಿ ಉದ್ಯೋಗ ಪಡೆದುಕೊಳ್ಳುತ್ತಿದ್ದು ಪುತ್ತೂರಿನವರಿಗೂ ಅಲ್ಲಿ ಉದ್ಯೋಗ ದೊರೆಯಬೇಕು, ನಮ್ಮೂರಿನ ಯುವಕ , ಯುವತಿಯರು ಮೇಲೆ ಬರಬೇಕು ಎಂಬ ಉದ್ದೇಶದಿಂದ ಶಾಸಕ ಅಶೋಕ್ ರೈ ಅವರು ತಮ್ಮ ಟ್ರಸ್ಟ್ ಮೂಲಕ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.














