
ಮಂಗಳೂರು : ನವ ಮಂಗಳೂರು ಬಂದರು ಸಿಬ್ಬಂದಿ ಮತ್ತು ನಿವೃತ್ತ ಸಿಬ್ಬಂದಿಗಳ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆದಿತ್ಯವಾರದಂದು ಪಣಂಬೂರು ಬಿಡಿಸಿ ಸಭಾಂಗಣದಲ್ಲಿ ನಡೆಯಿತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಭಾರತೀಯ ಮಜ್ದೂರ್ ಸಂಘ ವಿಶ್ವದ ಅತ್ಯಂತ ಬಲಿಷ್ಠ ಸಂಘಟನೆ ಹಾಗೂ ಕಾರ್ಮಿಕ ವರ್ಗಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿ ಕೊಡುವ ಸಂಘಟನೆಯಾಗಿದೆ ಸಂಘಕ್ಕೆ ಇನ್ನಷ್ಟು ಸದಸ್ಯರನ್ನು ನೋಂದಾಯಿಸಿಕೊಳ್ಳುವ ಜವಾಬ್ದಾರಿ ಸಂಘಟಕರಿಗೆ ಇದೆ ಎಂಬುದಾಗಿ ಹೇಳಿದರು.
ಎನ್ಎಂಪಿಎ ಸಿಬ್ಬಂದಿಗಳ ಮತ್ತು ನಿವೃತ್ತ ಸಿಬ್ಬಂದಿಗಳ ಹಾಗೂ ಕಾರ್ಮಿಕರ ನ್ಯಾಯ ಸಮ್ಮತವಾದ ಬೇಡಿಕೆಯನ್ನು ಸಂಘಟನೆಗಳ ಪ್ರಮುಖರು ಮನವರಿಕೆ ಮಾಡುವ ಮೊದಲೇ ಈಡೇರಿಸಲಾಗಿದೆ ಸಿಬ್ಬಂದಿಗಳಿಗೆ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಆರೋಗ್ಯ ಸೇತು ಆಪ್ ನ ಮುಖಾಂತರ ಹೆಸರು ನೊಂದಾಯಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ನೂತನ ಆಸ್ಪತ್ರೆಯು ಆಗಸ್ಟ್ ತಿಂಗಳಿನಲ್ಲಿ ಕಾರ್ಯ ಆರಂಭಗೊಳ್ಳಲಿದೆ ಎಂಬುದಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎನ್ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ತಿಳಿಸಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ , ಬಿಎಂಎಸ್ ಪೋರ್ಟ್ ಫೆಡರೇಶನ ರಾಷ್ಟ್ರೀಯ ಕಾರ್ಯದರ್ಶಿ ಕೆ. ಕೆ. ವಿಜಯನ್, ಬಿಎಂಎಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು., ಎನ್ಎಂಪಿಎ. ಬಿಎಂಎಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಭಂಡಾರಿ ಬೊಟ್ಯಾಡಿ , ಡಾಕ್ ಪೆನ್ಷನರ್ಸ್ ಸಂಘದ ಅಧ್ಯಕ್ಷ ಭರತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಮಾಲಿನಿ ಬೆಂಗ್ರೆ ಬಳಗದವರಿಂದ ರಸಮಂಜರಿ ಹಾಗು ಭವಿಷ್ ರಮೇಶ್ ಬೊಟ್ಯಾಡಿಯವರಿಂದ ಫಿಲಂ ಡ್ಯಾನ್ಸ್ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಮೇಶ್ ದೇವಾಡಿಗ ಸುರತ್ಕಲ್, ಮನೋರಮ, ಮತ್ತು ನಾಗರಾಜ ಅತ್ಯಧಿಕ ಅಂಕಗಳಿಸಿದ ಸೋನಿ, ಭವಿತ್, ತೇಜಶ್ರೀ ನಿವೃತ್ತರಾದ ಹಿರಿಯ ಸದಸ್ಯರಾದ ಯೋಗೀಶ್ ಆಚಾರ್ , ಕೇಶವ ಭಟ್, ಜಯರಾಮ್, ಪುರುಷೋತ್ತಮ, ಸೋಮಶೇಖರ್, ಪಟವರ್ಧನ್ ನಿವೃತ್ತರಾದ ಮಾಧವ ಬಂಗೇರ, ರಮೇಶ್ ಭಂಡಾರಿ ಬೊಟ್ಯಾಡಿ, ಮಧುಕರ, ಮತ್ತು ಶ್ರೀದೇವಿ ಇವರನ್ನು ಸನ್ಮಾನಿಸಲಾಯಿತು.
ಭರತ್ ಕುಮಾರ್ ಸ್ವಾಗತಿಸಿ ಸಂಘದ ಕಾರ್ಯದರ್ಶಿ ವಿಘ್ನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಬಿಎಂಸ್ ನ ಗೌರವ ಧ್ಯಕ್ಷ ವೆಂಕಪ್ಪ ನಾಯ್ಕ್ಉಪಾಧ್ಯಕ ಮದುಕರ್ ಕಾಂಚನ್, ಸತೀಶ್ ನಾಯ್ಕ್ ರೂಪೇಶ್ ರೈ ಭಗವಾನ್ ದಾಸ್, ಜಿಲ್ಲಾ ಉಪಾಧ್ಯಕ್ಷ ರೋಹಿತ್ ಕುಮಾರ್, ಸಂಜಯ್ ಬೆಂಗ್ರೆ, ಶ್ರೀಧರ್, ಸುಧಾಕರ್, ಅರ್ಜುನ್ ಬೈತಾ, ಪ್ರವೀಣ್, ಶ್ರೀನಿವಾಸ್ ಪೈ, ಉಪಸ್ಥಿತರಿದ್ದರು














