Thursday, March 12, 2026
ಉಡುಪಿಕುಂದಾಪುರಜಿಲ್ಲೆಸುದ್ದಿ

ನಮ್ಮ ಸುತ್ತಲಿನ ಪರಿಸರವನ್ನು ಹಸಿರುಗೊಳಿಸುವುದರಿಂದ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು: ಶಾಸಕ ಎ.ಕಿರಣ್ ಕೊಡ್ಗಿ -ಕಹಳೆ ನ್ಯೂಸ್

ಕುಂದಾಪುರ : ವಿಜಯ ಕರ್ನಾಟಕ ಐಎಂಜೆ ಇನ್ಸ್ಟಿ ಟ್ಯೂಷನ್ಸ್ ಮೂಡ್ಲಕಟ್ಟೆ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮೂಡ್ಲಕಟ್ಟೆ ಎಂ.ಐ.ಟಿ. ಆವರಣದಲ್ಲಿ ಸಸಿ ನೆಡುವ ಮೂಲಕ ದೀಪವನ್ನು ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಸರ ದಿನಾಚರಣೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನಮ್ಮ ಸುತ್ತಲಿನ ಪರಿಸರವನ್ನು ಹಸಿರುಗೊಳಿಸುವುದರಿಂದ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಗಿಡ ನೆಡುವ ಮೂಲಕ ಪರಿಸರ ಪ್ರೇಮಿ ಎನಿಸಿ ನಂತರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೇ ಪರಿಸರದ ಕುರಿತಾದ ಭಾಷಣಗಳಿಗೆ ಸೀಮಿತ ವಾಗಿಬಿಟ್ಟಿದೆ. ಆನಂತರ ಪರಿಸರ ದಿನ ನೆನಪಾಗಬೇಕೆಂದರೆ ಮುಂದಿನ ವರ್ಷವೇ ಬರಬೇಕು. ಆದುದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾರ್ಥ್ ಜೆ.ಶೆಟ್ಟಿ ಅಧ್ಯಕ್ಷರು ಐಎಂಜೆ ಇನ್ಸ್ಟಿಟ್ಯೂಷನ್ ಮೂಡ್ಲಕಟ್ಟೆ, ವಹಿಸಿದರು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ರಾಘವೇಂದ್ರ ನಾಯ್ಕ್ ಆರ್‌ಎಫ್‌ಒ,, ಅತಿಥಿಗಳಾಗಿ ಪ್ರದೀಪ್ ಕುರಡೇಕರ್ ತಹಶೀಲ್ದಾರರ ಕುಂದಾಪುರ, ರಾಕೇಶ್ ಸೋನ್ಸ್ ಅಧ್ಯಕ್ಷರು ಎಫ್ ಎಸ್ ಎಲ್ ಇಂಡಿಯಾ, ಹಾಗೂ ಪ್ರವೀಣ್ ಕುಮಾರ್ ವೈಲ್ಡ್ ಲೈಫ್ ಫೋಟೋಗ್ರಾಫರ್, ದೀಪಕ್ ಸಲುಜ ಸಿಇಒ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್, ಸುದರ್ಶನ್ ಚೆನ್ನಂಗಿ ಹಳ್ಳಿ ಸಂಪಾದಕರು ವಿಜಯ ಕರ್ನಾಟಕ, ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಕುಂದಾಪುರ ಭಾಗದ ಅಧಿಕಾರಿಗಳು ವಿದ್ಯಾರ್ಥಿಗಳು ಪ್ರಮುಖರು ಉಪಸ್ಥಿತರಿದ್ದರು.