Sunday, March 8, 2026
ಕಾರ್ಕಳಸುದ್ದಿ

ಅಂದು ಬೇಡ ಅಂದ್ರು, ಇಂದು ಬೇಕೇ ಬೇಕು ಅಂತಿದ್ದಾರೆ..! ಕಾಂಗ್ರೆಸ್ ನ ಬೇಕು ಬೇಡಗಳ ರಾಜಕೀಯದ ಮಧ್ಯೆ ಬಲಿಯಾಗುತ್ತಿದೆ ಕಾರ್ಕಳದ ಪ್ರವಾಸೋದ್ಯಮ..! ಸುನೀಲ್ ಕುಮಾರ್ ಅವರ ವಿರುದ್ಧ ರಾಜಕೀಯ ಮಾಡುವ ಬರದಲ್ಲಿ ಪರಶುರಾಮನನ್ನೇ ಮಾಧ್ಯಮವಾಗಿಸಿದ್ರಾ ಉದಯ್ ಕುಮಾರ್ ಶೆಟ್ಟಿ ಮುನಿಯಾಳ್..?-ಕಹಳೆ ನ್ಯೂಸ್

ಕಾರ್ಕಳ: ನಗರದ ಉಮಿಕಲ್ ಬೆಟ್ಟದ ಮೇಲೆ ನಿರ್ಮಾಣವಾಗಿದ್ದ ಕರಾವಳಿಯ ಸಂಸ್ಕೃತಿಯ ಪ್ರತೀಕವಾಗಿ ಮತ್ತು ತುಳುನಾಡಿನ ಶ್ರೇಷ್ಟತೆಯನ್ನು ಸಾರುವ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ವೈಭವದ ಪ್ರತಿಮೆ ಶಾಸಕ ಸುನೀಲ್ ಕುಮಾರ್ ಅವರ ಕನಸಿನ ಕೂಸಾಗಿದ್ದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಗೊಂಡು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಆದರೆ ಇದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅದಾದ ನಂತರ ಅನೇಕ ಬೆಳವಣಿಗೆಗಳು ನಡೆದು ಪರಶುರಾಮನ ಮೂರ್ತಿ ಪ್ಲಾಸ್ಟಿಕ್ ನದ್ದು, ಫೈಬರ್ ನದ್ದು ಎಂಬ ಆರೋಪಗಳು ಕೂಡಾ ಕೇಳಿ ಬಂದಿತ್ತು. ಬಳಿಕ ವಿವಿಧ ಹಂತದಲ್ಲಿ ತನಿಖೆಗಳು ನಡೆದು ಇದೀಗ ಪೊಲೀಸರು ಚಾರ್ಜ್ ಶೀಟ್ ಕೂಡಾ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಇದು ಫೈಬರ್ ನದ್ದು ಅಲ್ಲ ಎಂಬ ಪ್ರಮುಖವಾದ ಅಂಶ ಹೊರ ಬಂದಿದ್ದು, ಕಾಂಗ್ರೆಸ್ ನ ಆರೋಪಗಳೆಲ್ಲವೂ ಸುಳ್ಳು ಎಂಬAತಾಗಿದೆ. ಮಾತ್ರವಲ್ಲ ಕಾಂಗ್ರೆಸ್ ಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಇದರಿಂದ ಮುಖಭಂಗ ಎದುರಿಸಿದ ಉದಯ್ ಕುಮಾರ್ ಶೆಟ್ಟಿಯವರು ತಮ್ಮ ಅಂದು ಇದ್ದ ನಿಲುವಿಗೆ ಇಂದು ಭಿನ್ನವಾಗಿ ನಡೆದುಕೊಂಡಿರುವುದು ಇದೀಗ ಕಾರ್ಕಳದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಮೊದಲನೆಯದಾಗಿ ದೊಡ್ಡ ರೀತಿಯ ಹೋರಾಟಗಳನ್ನು ಮತ್ತು ಪ್ರತಿಭಟನೆಗಳನ್ನು ಮಾಡಿದ ಕಾಂಗ್ರೆಸ್ ಶಾಸಕ ಹಾಗೂ ಅಂದಿನ ಸಚಿವರಾಗಿದ್ದ ಸುನೀಲ್ ಕುಮಾರ್ ವಿರುದ್ಧ ಸಾಕಷ್ಟು ಆರೋಪಗಳನ್ನು ಹೊರಿಸಿತ್ತು. ಆದರೆ ಇದಾದ ಬಳಿಕ ಪರಶುರಾಮ ಥೀಮ್ ಪಾರ್ಕ್ ಅಗತ್ಯ ಯಾಕಿತ್ತು ಎಂಬ ಮಟ್ಟಿನಲ್ಲಿ ಚರ್ಚೆಗಳನ್ನು ಕಾಂಗ್ರೆಸ್ ಮಾಡಿತ್ತು. ಮಾತ್ರವಲ್ಲ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನೂ ಕೂಡಾ ಮಾಡಿತ್ತು. ಇದಾದ ಬಳಿಕ ಅನೇಕ ಕಾನೂನಿನ ಮೊಕದ್ದೆಮಗಳು ನ್ಯಾಯಾಲಯದಲ್ಲಿ ನಡೆದಿದ್ದು, ಈ ಕುರಿತಂತೆ ಅನೇಕ ತನಿಖೆ ಕೂಡಾ ನಡೆದಿದೆ. ತನಿಖೆಯಲ್ಲಿ ಚಾರ್ಜ್ ಶೀಟ್ ಕೂಡಾ ಪೊಲೀಸರು ಸಲ್ಲಿಕೆ ಮಾಡಿದ್ದು, ಇದೀಗ ಆ ಚಾರ್ಜ್ ಶೀಟ್ ಸಲ್ಲಿಕೆಯ ಬಳಿಕ ಮತ್ತೆ ಪರಶುರಾಮ ಥೀಮ್ ಪಾರ್ಕ್ ವಿಚಾರ ಮುನ್ನಲೆಗೆ ಬಂದಿದೆ. ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಅಂಶ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಗೆ ಮತ್ತು ಇದರ ನೇತೃತ್ವ ವಹಿಸಿಕೊಂಡಿರುವ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರಿಗೆ ತೀವ್ರ ಮುಖಭಂಗವಾಗಿದೆ ಎನ್ನುವ ರೀರಿಯಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದರಿಂದ ತಮ್ಮನ್ನು ತಾವು ಬಚ್ಚಾವ್ ಮಾಡಿಕೊಳ್ಳಲು ಇದೀಗ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರು ನ್ಯಾಯಾಲಯದ ಮೊರೆ ಹೋಗಿರುವುದು ಕಂಡು ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಯಾಲಯದಲ್ಲಿ ಉದಯ್ ಕುಮಾರ್ ಶೆಟ್ಟಿಯವರು ಪಿಎಎಲ್ ಒಂದನ್ನು ಸಲ್ಲಿಸಿದ್ದು, ಪರಶುರಾಮ ಥೀಂ ಪಾರ್ಕ್ನ್ನು ಅತ್ಯಂತ ಶೀಘ್ರವಾಗಿ ಮಾಡಬೇಕು ಎಂಬAತೆ ನ್ಯಾಯಾಲಯದ ಮುಂದೆ ದುಂಬಾಲು ಬಿದ್ದಿದ್ದಾರೆ. ಇದೀಗ ಈ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರ ಪಿಎಎಲ್ ವಿಚಾರ ಕಾರ್ಕಳ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದ್ದು, ಉದಯ್ ಕುಮಾರ್ ಶೆಟ್ಟಿಯವರಿಗೆ ನಿಜವಾಗಿಯೂ ಆಗಬೇಕಾಗಿದ್ದು ಏನು..? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಒಂದೆಡೆ ಸುನೀಲ್ ಕುಮಾರ್ ಅವರನ್ನು ರಾಜಕೀಯವಾಗಿ ಟೀಕಿಸುವ ಅಥವಾ ಎದುರಿಸುವ ಭರದಲ್ಲಿ ಉದಯ್ ಕುಮಾರ್ ಶೆಟ್ಟಿಯವರು ತುಳುನಾಡಿನ ಸೃಷ್ಟಿಕರ್ತರಾಗಿರುವ ಪರಶುರಾಮ ಹಾಗೂ ಕಾರ್ಕಳದ ಪ್ರವಾಸೋದ್ಯಮವನ್ನೇ ಮಾಧ್ಯಮವಾಗಿಸಿದ್ದಾರಾ..? ಎಂಬ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ.

ಜಾಹೀರಾತು
ಜಾಹೀರಾತು

ಮಾತ್ರವಲ್ಲ, ಇದೀಗ ಸುನೀಲ್ ಕುಮಾರ್ ಅವರ ವಿರುದ್ಧದ ಈ ನಡೆ ಒಂದೆಡೆಯಾದರೆ ಇನ್ನೊಂದೆಡೆ ಇದರಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರ ಧ್ವಂಧ್ವ ನೀತಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ. ಒಂದೊಮ್ಮೆ ಇದು ಅಗತ್ಯವಿತ್ತೇ..? ಎಂಬುದಾಗಿ ಮಾತನಾಡುತ್ತಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರು ಅತ್ಯಂತ ವೇಗವಾಗಿ ಪರಶುರಾಮ ಥೀಂ ಪಾರ್ಕ್ ಆಗಬೇಕು ಎಂಬAತೆ ಮಾತನಾಡುತ್ತಿರುವುದು ಇವರ ಇಬ್ಬಗೆಯ ನೀತಿಗೆ ಕೈಗನ್ನಡಿಯಾಗಿದ್ದು, ಇದನ್ನು ಬಿಜೆಪಿ ಕೂಡಾ ವ್ಯಾಪಕವಾಗಿ ವ್ಯಂಗ್ಯ ಮಾಡುತ್ತಿದೆ. ಮಾತ್ರವಲ್ಲ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರ ಈ ನಡೆ ಇವತ್ತು ನಗೆಪಾಟಾಲಿಗೆ ಈಡಾಗಿದೆ ಎಂಬAತೆ ವ್ಯಾಖ್ಯಾನಗಳು ಕೂಡಾ ಕಾರ್ಕಳದ ರಾಜಕೀಯ ವಲಯದಲ್ಲಿ ಚರ್ಚೆಗಳಾಗುತ್ತಿದ್ದು, ಒಟ್ಟಿನಲ್ಲಿ ರಾಜಕೀಯ ಮುಖಂಡರುಗಳು ಹಾಗೂ ರಾಜಕಾರಣಿಗಳು ಯಾವುದರಲ್ಲಿ ರಾಜಕೀಯ ಮಾಡಬೇಕೋ ಅದರಲ್ಲಿ ರಾಜಕೀಯ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬುದು ಮತ್ತೊಮ್ಮೆ ಕಾರ್ಕಳದ ಕಾಂಗ್ರೆಸ್ ಗೆ ಮತ್ತು ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರಿಗೆ ಮನದಟ್ಟು ಮಾಡುವ ಅನಿವಾರ್ಯತೆ ಇದೆ ಎಂದು ಕಾರ್ಕಳದ ಸಾಮಾನ್ಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.