ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯವನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಎಬಿವಿಪಿ ವತಿಯಿಂದ ಪುತ್ತೂರಿನ ನಗರದಲ್ಲಿ ನಡೆದ ಪ್ರತಿಭಟನೆ -ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿ ವೇತನ ಬಿಡುಗಡೆ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯವನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಎಬಿವಿಪಿ ವತಿಯಿಂದ ಪುತ್ತೂರಿನ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಹಾಸ್ಟೆಲ್ ಗಳ ಸಮಸ್ಯೆ
ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯದಲ್ಲಿ, ಪ್ರತಿ ತಿಂಗಳು ಊಟದ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಗೆ 1,850 ರೂ ಮಾತ್ರ ನೀಡಲಾಗುತ್ತಿದೆ ಈ ಹಣದಲ್ಲಿ ಡಯಟ್ ಚಾರ್ಟ್ ನಲ್ಲಿ ಇರುವಂತೆ ಸರಿಯಾಗಿ ಆಹಾರವನ್ನು ಕೊಡುವುದಕ್ಕೆ ಆಗುತ್ತಿಲ್ಲ.ಈ ರೀತಿ ಹಲವಾರು ಸಮಸ್ಯೆಗಳು ರಾಜ್ಯದ ವಸತಿ ನಿಲಯಗಳಲ್ಲಿದ್ದು ರಾಜ್ಯ ಸರ್ಕಾರ ತಕ್ಷಣವೇ ಹಾಸ್ಟೆಲ್ ಗಳ ಮೂಲಭೂತ ಸೌಲಭ್ಯಕ್ಕೆ ವಿಶೇಷ ಅನುದಾನವನ್ನ ನೀಡಬೇಕು
ಬಸ್ ಸಮಸ್ಯೆ
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗನಿಂದ ಸರ್ಕಾರಿ ಸಾರಿಗೆ ಯಲ್ಲಿ ಹಲವಾರು ತೊಂದರೆ ಗಳು ಉಂಟಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರಯಾಸದಿಂದ ಜೀವ ಕೈಯಲ್ಲಿಡಿದು ಪ್ರಯಾಣಿಸುವ ಸಂದರ್ಭ ಬಂದಿದೆ.
ವಿದ್ಯಾರ್ಥಿ ವೇತನ ಬಿಡುಗಡೆ
ಕಳೆದ ವರ್ಷದ ವಿದ್ಯಾರ್ಥಿವೇತನ ಜಮೆಯಾಗದೇ ಬಹಳಷ್ಟು ವಿದ್ಯಾರ್ಥಿಗಳು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ವಿದ್ಯಾಸಿರಿ, ರೈತ ವಿದ್ಯಾನಿಧಿ ಹಾಗೂ ಇನ್ನುಳಿದ ವಿದ್ಯಾರ್ಥಿ ವೇತನವು ಸರಿಯಾಗಿ ವಿದ್ಯಾರ್ಥಿಗಳಿಗೆ ಜಮೆ ಮಾಡದೆ ವಿದ್ಯಾರ್ಥಿ ವಿರೋಧಿ ನೀತಿಯನ್ನ ಅನುಸರಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬAಧಿಸಿದ ಸಚಿವರು ಈ ಕ್ಷಣವೇ ವಿದ್ಯಾರ್ಥಿವೇತ, ಹಾಸ್ಟೆಲ್ ಸಮಸ್ಯೆ ಹಾಗೆಯೇ ಬಸ್ ಸಮಸ್ಯೆ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಎಬಿವಿಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಈ ಮೂಲಕ ಹೇಳುತ್ತಿದ್ದೇವೆ.














