Monday, March 9, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸೇವಾಭಾರತಿಯಿಂದ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ -ಕಹಳೆ ನ್ಯೂಸ್

ಬೆಳ್ತಂಗಡಿ : ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚೀಫ್ ಜನರಲ್ ಮ್ಯಾನೇಜರ್ ಶ್ರೀ , ಅನಂತ ಹೆಗ್ಡೆ ಮತ್ತು ಶ್ರೀ ಗೋಪಾಲಕೃಷ್ಣರವರನ್ನು ಭೇಟಿ ಮಾಡಲಾಯಿತು. ಸೇವಾಧಾಮ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಅವರಿಗೆ ವಿವರಿಸಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕಾಗಿ ತಮ್ಮ ಬ್ಯಾಂಕ್ ನ CSR ನ ಮೂಲಕ ಸಹಕರಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಮತ್ತು ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಶ್ರೀ ಮೋಹನ ಎಸ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು