ಶಿವಾಜಿ ಯುವಕ ಮಂಡಲ ನೆಹರು ನಗರ ಕಲ್ಲೇಗ ಇವರ ಆಶ್ರಯದಲ್ಲಿ ನಡೆಯಲಿರುವ 50 ನೇ ವರ್ಷದ ಕಲ್ಲೇಗ ಮೊಸರುಕುಡಿಕೆ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ -ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಿವಾಜಿ ಯುವಕ ಮಂಡಲ ನೆಹರು ನಗರ ಕಲ್ಲೇಗ ಇವರ ಆಶ್ರಯದಲ್ಲಿ ನಡೆಯಲಿರುವ 50ನೇ ವರ್ಷದ ಕಲ್ಲೇಗ ಮೊಸರುಕುಡಿಕೆ-2025 ಕಾರ್ಯಕ್ರಮವು ಆ.23 ಮತ್ತು 24ರಂದು ಭಾರತ್ ಮಾತಾ ಸಮುದಾಯ ಭವನ ಕಲ್ಲೇಗದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್, ಸಂಜೀವ ನಾಯ್ಕ ಕಲ್ಲೇಗ, ಡಾ. ರವಿನಾರಯಣ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು..
















