ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದ ಪರಿಯಲ್ತಡ್ಕ ಒಕ್ಕೂಟದ ವಾರ್ಷಿಕೋತ್ಸವ- ಕಹಳೆ ನ್ಯೂಸ್

ಶ್ರೀ, ಕ್ಷೆ, ಧ, ಗ್ರಾ ಯೋಜನೆ ಬಿಸಿ(ಟ್ರಸ್ಟ್) ವಿಟ್ಲ ತಾಲೂಕಿನ ಅಳಿಕೆ ವಲಯದ ಪರಿಯಲ್ತಡ್ಕ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣಚ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿರವರು ವಹಿಸಿದ್ದರು. ದ.ಕ.ಜಿ .ಪಂ ಶಾಲೆ ದೇವಿನಗರ ಇಲ್ಲಿಯ ನಿವೃತ್ತ ಶಿಕ್ಷಕರಾದ ಗಂಗಮ್ಮರವರು ಉದ್ಘಾಟಿಸಿದರು. ಅಳಿಕೆ ವಲಯದ ಮೇಲ್ವಿಚಾರಕರಾದ ಮೀನಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ=2 ನಿರ್ದೇಶಕರಾದ ಬಾಬು ನಾಯ್ಕ್ ರವರು ಯೋಜನೆ ಪ್ರತಿನಿಧಿ ಸಾಲಗಳಿಗೆ ವಿಧಿಸುವ ಬಡ್ಡಿದರದ ಬಗ್ಗೆ ವಿವರಿಸಿದರು.ಒಕ್ಕೂಟದ ಹಾಗು ಸಂಘಗಳಿಗೆ ನೀಡುವ ಗ್ರೇಡಿಂಗ್,ಸಂಘದ ದಾಖಲಾತಿಯ ಬಗ್ಗೆ ತಿಳಿಸಿದರು.ನಿರ್ಗತಿಕ ಕುಟುಂಬಗಳಿಗೆ ಮಾಶಾಸನ,ಜನಮಂಗಳ ಕಾರ್ಯಕ್ರಮದಡಿ ವಾಟರ್ ಬೆಡ್ಡ್, U ವಾಕರ್ ಸ್ಟಿಕ್,ವೀಲ್ ಚೇರ್,ಕಮಾಡೋ ವೀಲ್ ಚೇರ್ ಮುಂತಾದ ಉಪಕರಣಗಳು,ಸಮುದಾಯಭಿವೃದ್ಧಿ ಕಾರ್ಯಕ್ರಮದಡಿ ದೇವಸ್ಥಾನಗಳಿಗೆ ಅನುದಾನದ ಬಗ್ಗೆ ತಿಳಿಸಿದರು. ಸಂಘದ ಹಿರಿಯ ಸದಸ್ಯರನ್ನು ಹಾಗು ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲುಕಿನ ಯೋಜನಾಧಿಕಾರಿ ಸುರೇಶ್ ಗೌಡ,ಅಳಿಕೆ ವಲಯದ್ಯಕ್ಷರಾದ ರಾಜೇಂದ್ರ ರೈ,ಒಕ್ಕೂಟದ ಅಧ್ಯಕ್ಷರಾದ ಶಿವಪ್ಪ ಮೂಲ್ಯ,ಒಕ್ಕೂಟದ ಪದಾಧಿಕಾರಿ ಯವರು , ಸದಸ್ಯರು.ಸೇವಾಪ್ರತಿನಿಧಿ ವಿನಯ ರೈ ಮುಳಿಯ ಒಕ್ಕೂಟದ. ಅಧ್ಯಕ್ಷರಾದ ಉದಯ್,ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಉಪಸ್ಥಿತರಿದ್ದರು.ಮುಳಿಯ ಒಕ್ಕೂಟದ ಸದಸ್ಯರಾದ ಮಮತರವರು ಕಾರ್ಯಕ್ರಮ ನಿರ್ವಹಿಸಿ. ರಾಜೇಶ್ವರಿಯವರು ವರದಿ ಮಂಡಿಸಿದರು.ಒಕ್ಕೂಟದ ಕಾರ್ಯದರ್ಶಿಯವರು ಸ್ವಾಗತಿಸಿ ಸುಶೀಲರವರು ಧನ್ಯವಾದ ಮಾಡಿದರು.














