Friday, March 6, 2026
ದಕ್ಷಿಣ ಕನ್ನಡಯಕ್ಷಗಾನ / ಕಲೆಸುದ್ದಿ

ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ – ಕಹಳೆ ನ್ಯೂಸ್

ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ( 93 ) ಅವರು ಇಂದು ಮುಂಜಾನೆ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 5.00 ಘಂಟೆಗೆ ಹವ್ಯಕ ಬ್ರಾಹ್ಮಣ ವಿಧಿಗಳೊಂದಿಗೆ ಉಪ್ಪಿನಂಗಡಿಯ ಸಮೀಪದ ಅವರ ಮನೆಯಲ್ಲಿಯೇ ನಡೆಯಲಿದೆ.

ಪಾತಾಳ ವೆಂಕಟರಮಣ ಭಟ್ :
ಒಬ್ಬ ಹಿರಿಯ ಯಕ್ಷಗಾನ ಕಲಾವಿದ ಮತ್ತು ಸ್ತ್ರೀ ಪಾತ್ರಧಾರಿ. ಅವರು ಧರ್ಮಸ್ಥಳ ಮೇಳದಲ್ಲಿ 18 ವರ್ಷಗಳ ಕಾಲ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಮೂರು ದಶಕಗಳಿಗಿಂತ ಹೆಚ್ಚು ಕಾಲ ವ್ಯವಸಾಯ ಮಾಡಿದರು. ಅವರು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ಕುರಿತು ಅಧ್ಯಯನ ಮಾಡಿದ್ದಾರೆ ಮತ್ತು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಪಾತಾಳ ವೆಂಕಟರಮಣ ಭಟ್ ಅವರು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿಭಾಯಿಸುವಲ್ಲಿ ಪರಿಣಿತರಾಗಿದ್ದರು. ಅವರು ಸ್ತ್ರೀ ಪಾತ್ರಗಳಿಗೆ ಸಂಬಂಧಿಸಿದಂತೆ ಶಿವರಾಮ ಕಾರಂತರ ಸವಾಲನ್ನು ಸ್ವೀಕರಿಸಿ, ಡಿ.ವಿ.ಗುಂಡಪ್ಪನವರ ‘ಅಂತಃಪುರ ಗೀತೆ’ ಪುಸ್ತಕವನ್ನು ಅಧ್ಯಯನ ಮಾಡಿ, ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಬೇಕಾದ ಅಂಶಗಳನ್ನು ಅಳವಡಿಸಿಕೊಂಡರು. ಅವರು ಬೇಲೂರು ಶಿಲಾಬಾಲಿಕೆ ಶಿಲ್ಪಗಳ ನಿಲುವು ಮತ್ತು ಆಹಾರ್ಯಗಳನ್ನೂ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷಕ್ಕೆ ಅಳವಡಿಸಿದರು. 

ಅವರ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪುತ್ತೂರು ತಾಲೂಕಿನ ಪಾತಾಳದವರು. ಅವರೊಬ್ಬ ಅಧ್ಯಯನಶೀಲ ಕಲಾವಿದರಾಗಿದ್ದು, ಯಕ್ಷಗಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. 

ಜಾಹೀರಾತು
ಜಾಹೀರಾತು