ಧರ್ಮಸ್ಥಳದ ತಲೆಬುರುಡೆ ಪ್ರಕರಣ ; ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಸಾಕ್ಷಿರಹಿತ, ಮಾನಹಾನಿಕರ ಆರೋಪ ಮಾಡದಂತೆ ತಡೆಯಾಜ್ಞೆ- ಕಹಳೆ ನ್ಯೂಸ್

ಈಗಾಲೇ ಪ್ರಕಟಗೊಂಡ ವಿಡಿಯೋಗಳನ್ನು ಆಳಿಸಲು ಖಡಕ್ ಸೂಚನೆ
ಬೆಂಗಳೂರು : ಧರ್ಮಸ್ಥಳದಲ್ಲಿ ನೂರಕ್ಕೂ ಹೆಚ್ಚು ಸರಣಿ, ಅತ್ಯಾಚಾರ ಹಾಗೂ ಹತ್ಯೆಗಳಾಗಿದೆ ಮತ್ತು ಶವಗಳನ್ನು ತಾನು ಹೂತು ಹಾಕಿದ್ದೇನೆ ಎಂಬ ವ್ಯಕ್ತಿ ನ್ಯಾಯಾಲಯ ಮುಂದೆ ಹಾಜರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವ್ಯಕ್ತಿಗಳು ಹಾಗೂ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಕುಟುಂಬಸ್ಥರ ಬಗ್ಗೆ ಸಾಕ್ಷಿರಹಿತ ಆರೋಪಗಳು ಹಾಗೂ ಅವಹೇಳನಾಕಾರಿ, ಮಾನಹಾನಿಕರ ಬಹರ, ಮಾತುಗಳನ್ನು ಆಡುತ್ತಿದ್ದು, ಇದನ್ನು ಪ್ರಶ್ನಿಸಿ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕೃರಿಸಿದ ನ್ಯಾಯಾಲಯ, ಮಾನ್ಯ ನ್ಯಾಯಾಧೀಶರಾದ ವಿಜಯ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶ ಮಾಡಿದೆ.

ಖ್ಯಾತ ನ್ಯಾಯವಾದಿ ರಾಜಶೇಖರ ಹಿಲ್ಯಾರ್ ಅವರ ವಾದವನ್ನು ಆಲಿಸಿದ ನ್ಯಾಯಾಲಯ ಅರ್ಜಿದಾರರ ಕುಟುಂಬ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರದ ಕುರಿತು ಯಾವುದೇ ಮಾನಹಾನಿಕರ ಅಂಶಗಳನ್ನೊಳಗೊಂಡ ವಿಷಯಗಳನ್ನು ಬಳಸದಂತೆ ಮತ್ತು ಈಗಾಗಲೇ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದವುಗಳನ್ನು ( ಡಿಲೀಟ್ ) ಆಳಿಸುವಂತೆ ಆದೇಶ ಮಾಡಿದೆ.














