Sunday, March 8, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಜಿ ವೀರಕಂಬ ಶಾಲೆಯಲ್ಲಿ ಅಗ್ನಿ ನಂದಕವನ್ನು ಬಳಸುವ ಪ್ರಾಯೋಗಿಕ ಚಟುವಟಿಕೆ-ಕಹಳೆ ನ್ಯೂಸ್

ಬಂಟ್ವಾಳ : ತರಗತಿಯ ಒಳಗೆ ಕಲಿಯುವ ಪಠ್ಯ ವಿಷಯಗಳು ಕೇವಲ ಸಿದ್ದಾಂತವನ್ನುಷ್ಟೇ ಕಲಿಸುತ್ತದೆ, ಆದರೆ ತರಗತಿ ಕೋಣೆಗಳ ಹೊರಗೆ ನಿತ್ಯ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಜ್ಞಾನವು ಮುಖ್ಯವಾಗಿದೆ ಈ ರೀತಿಯಾಗಿ ಅಗ್ನಿ ನಂದಕವನ್ನು ಬಳಸುವ ವಿಚಾರ ಪ್ರತಿಯೊಬ್ಬನಿಗೂ ತಿಳಿದಿರಬೇಕು ನಿತ್ಯ ಜೀವನದಲ್ಲಿ ಅದರ ಉಪಯೋಗವನ್ನು ಮಾಡುವ ವಿಧಾನವು ತಿಳಿದಾಗ ಅಪಾಯದ ಸಂದರ್ಭದಲ್ಲಿ ಯಾವುದೇ ಅಂಜಿಕೆ ಇಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಮಜಿ ಶಾಲೆಯ ದೈಹಿಕ ಶಿಕ್ಷಕ ಇಂದುಶೇಖರ್ ಹೇಳಿದರು.

ಅವರು ವೀರಕಂಬ ಮಜಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ, ಅಡುಗೆ ಸಿಬ್ಬಂದಿಗಳಿಗೆ, ಅಗ್ನಿನಂದಕದ ಪ್ರಾಯೋಗಿಕ ಚಟುವಟಿಕೆಯನ್ನು ನಡೆಸುವ ಮೂಲಕ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶಾಲೆಗೆ ಉಚಿತ ತರಕಾರಿ ಪೂರೈಸುತ್ತಿರುವ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ಮಾಲಕ ಮೊಹಮ್ಮದ್ ಶರೀಫ್, ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು