Friday, March 6, 2026
ಜಿಲ್ಲೆಸಂತಾಪಸುದ್ದಿಹುಬ್ಬಳ್ಳಿ

ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ – ಕಹಳೆ ನ್ಯೂಸ್

ಹುಬ್ಬಳ್ಳಿ : ಒಂದೇ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ನಡೆದಿದೆ. ರವಿರಾಜ್‌ ಜಾಡರ್‌(42) ಮತ್ತು ಬಸವನಗೌಡ ಪಾಟೀಲ್‌(56) ಮೃತ ದುರ್ದೈವಿಗಳು. ಕಳೆದ 24 ಗಂಟೆಗಳಲ್ಲಿ ಇಬ್ಬರು ರೈತರು ನೇಣಿಗೆ ಶರಣಾಗಿದ್ದು ಭಾರಿ ಆತಂಕ ಮೂಡಿಸಿದೆ.

ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಹೊಡೆತಕ್ಕೆ ಕಂಗಾಲಾಗಿದ್ದ ರೈತರು,ಕೃಷಿಗಾಗಿ ಬ್ಯಾಂಕ್‌ ಮತ್ತು ಖಾಸಗಿಯಾಗಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ರೈತರ ಆತಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಗೋಳ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು