ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ ಶ್ರೀ ರಾಮ ಸಮುದಾಯ ಭವನ ಬೆಳಿಯೂರುಕಟ್ಟೆ ಶಾಖೆಯಲ್ಲಿ ಗುರುಪೂರ್ಣಿಮೆ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ ಶ್ರೀ ರಾಮ ಸಮುದಾಯ ಭವನ ಬೆಳಿಯೂರುಕಟ್ಟೆ ಶಾಖೆಯಲ್ಲಿ ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶ್ರೀಮತಿ ಶೈಲಾ ಅಕ್ಕನವರು ಬೌದ್ಧಿಕ ಅವಧಿ ನಡೆಸಿಕೊಟ್ಟರು. ಗುರುವಿನ ಮಹತ್ವವನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿದರು. ಭಾರತಮಾತೆಯ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಎಲ್ಲರೂ ಪುಷ್ಪವನ್ನು ಸಮರ್ಪಿಸಿದರು.
ಪ್ರಸಾದನ್ನು ಸಮರ್ಪಿಸಿ ಅನ್ನಪೂರ್ಣೇಶ್ವರಿ ಮಂತ್ರವನ್ನು ಪಠಿಸಿ ಭಜನೆಯೊಂದಿಗೆ ಪ್ರಸಾದವನ್ನು ಸ್ವೀಕರಿಸಲಾಯಿತು. ಶಾಖೆಯ ಶಿಕ್ಷಕರು ಹಾಗೂ ಎಲ್ಲ ಯೋಗ ಬಂದುಗಳು ಭಾಗವಹಿಸಿದ್ದರು.














