Saturday, March 7, 2026
ಕಡಬಜಿಲ್ಲೆದಕ್ಷಿಣ ಕನ್ನಡಸುದ್ದಿ

ಶ್ರೀ ಭಾರತಿ ಶಿಶುಮಂದಿರ ಕಡಬದಲ್ಲಿ ಪುಟಾಣಿಗಳ ಪ್ರವೇಶೋತ್ಸವ ಮತ್ತು ಪಾಲಕರ ಸಭೆ -ಕಹಳೆ ನ್ಯೂಸ್

ಕಡಬ : ಸಂಸ್ಕಾರಯುತ ಶಿಕ್ಷಣವನ್ನು ಚಟುವಟಿಕೆ ಆಧಾರಿತವಾಗಿ ನೀಡುವ ಮೂಲಕ ಸಮಾಜದ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವ ಪ್ರಯತ್ನ ಶ್ರೀ ಭಾರತೀ ಶಿಶು ಮಂದಿರದ ವತಿಯಿಂದ
ನಡೆಸಲಾಗುತ್ತದೆ ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ಹೇಳಿದರು.

ಶ್ರೀ ಭಾರತಿ ಶಿಶುಮಂದಿರ ವಿದ್ಯಾನಗರ ಪಂಜ ರಸ್ತೆ ಕಡಬದಲ್ಲಿ ಶುಕ್ರವಾರ ನಡೆದ ಪುಟಾಣಿಗಳ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣಿ ಕನ್ಸಲ್ಟೆನ್ಸಿ ಕಡಬ
ಇದರ ಮಾಲಕರಾದ ಶ್ರೀ ಮನಮೋಹನ್ ರೈ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಹೊಸಮಠ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ
ದೇವಾಡಿಗ ಅನಿಲ ಇವರು ಅಗ್ನಿಕುಂಡಕ್ಕೆ ಘೃತಾಹುತಿ ಮಾಡುವುದರ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುಟಾಣಿಗಳು ಪಾಲಕರೊಂದಿಗೆ ಹೋಮಕುಂಡಕ್ಕೆ ಹವಿಸ್ಸು ಸಮರ್ಪಣೆ ಮಾಡಿ ಅತಿಥಿಗಳಿಂದ ಆಶೀರ್ವಾದ ಪಡೆದು, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪಾಲಕರ
ಸಭೆಯಲ್ಲಿ ಪಠ್ಯಪುಸ್ತಕ ಹಾಗೂ ಮಕ್ಕಳ ದೈನಂದಿನ ವಿಚಾರಗಳ ಕುರಿತು ಚರ್ಚಿಸಲಾಯಿತು.

ಜಾಹೀರಾತು
ಜಾಹೀರಾತು

ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ
ರೇಷ್ಮಾ ಜಗನ್ನಾಥ ಶೆಟ್ಟಿ ಬಲ್ಯ ಹಾಗೂ ಆಡಳಿತ ಮಂಡಳಿ ಸದಸ್ಯೆ ಉಪಸ್ಥಿತರಿದ್ದರು. ಕುಮಾರಿ ಮಹಾದೇವಿ ಸ್ವಾಗತಿಸಿ ಶ್ರೀಮತಿ ವಿದ್ಯಾ ವಂದಿಸಿದರು
ಸುಶುಮAದಿರದ ಮುಖ್ಯ ಮಾತಾಜಿ ಕುಮಾರಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.