ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಶ್ರೀ ರಾಮ ಸಮುದಾಯ ಭವನ ಬೆಳಿಯೂರುಕಟ್ಟೆ ಶಾಖೆಯ ವತಿಯಿಂದ ನಡೆದ ಯೋಗ ಬಂಧುಗಳ ಸಹಭೋಜನ ಮತ್ತು ವನಮಹೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಶ್ರೀ ರಾಮ ಸಮುದಾಯ ಭವನ ಬೆಳಿಯೂರುಕಟ್ಟೆ ಶಾಖೆಯ ವತಿಯಿಂದ ಯೋಗ ಬಂಧುಗಳ ಸಹಭೋಜನ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಸಹಭೋಜನ ಕಾರ್ಯಕ್ರಮವು ಮುರಳೀಧರ ಅಣ್ಣ ಬೆಳಿಯೂರುಕಟ್ಟೆ ಅವರ ಮನೆಯಲ್ಲಿ ನಡೆದಿದ್ದು, ಸಹಭೋಜನದ ಮಹತ್ವ ಮತ್ತು ವಿವರಣೆಯನ್ನು ಯೋಗಿಶ್ ಅಣ್ಣ ಅವರು ಯೋಗ ಬಂಧುಗಳಿಗೆ ಬೋಧಿಸಿದರು.. ಇನ್ನು ವನಮಹೋತ್ಸವ ಕಾರ್ಯಕ್ರಮವು ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖೆಯ ಮುಖ್ಯ ಶಿಕ್ಷಕ ಯೋಗಿಶ್ ಅಣ್ಣ, ಶಾಖೆಯ ಶಿಕ್ಷಕರಾದ ಪ್ರಶಾಂತ್ ಅಣ್ಣ, ಸೌಮ್ಯ ಅಕ್ಕ, ವನಿತಾ ಅಕ್ಕ ಮತ್ತು ಶಾಖೆಯ ಎಲ್ಲಾ ಯೋಗ ಬಂಧುಗಳು ಉಪಸ್ಥಿತರಿದ್ದರು..














